* ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯಿಂದ ನೀಡುವ ರಾಷ್ಟ್ರೀಯ ಪುರಸ್ಕಾರಕ್ಕೆ “ಅನುಭವ ಮಂಟಪ ಪ್ರಶಸ್ತಿ'ಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್‌ ಅವರು ಆಯ್ಕೆಯಾಗಿದ್ದಾರೆ. * ನವೆಂಬರ್ 25 ರಿಂದ 26ರಂದು ನಡೆಯಲಿರುವ ಬಸವಕಲ್ಯಾಣದಲ್ಲಿ  'ಅನುಭವ ಮಂಟಪ ಉತ್ಸವ'ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ' ಎಂದು ಮಂಡಳಿ ಕಾರ್ಯದರ್ಶಿ ಡಾ.ಎಸ್.ಬಿ.ದುರ್ಗೆ ರವರು ತಿಳಿಸಿದ್ದಾರೆ.* ಈ ಪ್ರಶಸ್ತಿಯು 11 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದ್ದು, ಇಸ್ರೋ ಅಧ್ಯಕ್ಷ ಎಸ್ 'ಸೋಮನಾಥ್‌ ಅವರ ನೇತೃತ್ವದಲ್ಲಿ ಚಂದ್ರಯಾನ-3 ಯಶಸ್ವಿಯಾಗಿದ್ದು, ದೇಶದ ಕೀರ್ತಿ ಹೆಚ್ಚಿದೆ.