* ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯ ಖ್ಯಾತ ವಕೀಲರಾದ ಪಿ ಬಾಲಸುಬ್ರಮಣ್ಯಂ ಮೆನನ್ ಅವರು ಸುದೀರ್ಘ ಕಾಲ ವಕೀಲಿ ವೃತ್ತಿ ನಡೆಸಿ ದಾಖಲೆ ನಿರ್ಮಿಸಿದ್ದಾರೆ. * ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, 98 ವರ್ಷದ ಮೆನನ್ 73 ವರ್ಷ 60 ದಿನಗಳಿಂದ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. ಇದನ್ನು 2023ರ ಸೆಪ್ಟೆಂಬರ್ 11ರಂದು ದಾಖಲೆ ಪುಸ್ತಕಗಳಲ್ಲಿ ದಾಖಲಿಸಲಾಗಿದೆ.* ಮೆನನ್ ಅವರಿಗಿಂತ ಮೊದಲು, ಜಿಬ್ರಾಲ್ಟರ್ ಸರ್ಕಾರದ ವಕೀಲ ಲೂಯಿಸ್ ಟ್ರಾಯ್ ಅವರು ಸುದೀರ್ಘ ಅವಧಿಯ ವಕೀಲರ ದಾಖಲೆಯನ್ನು ಹೊಂದಿದ್ದರು. ಟ್ರಾಯ್ 70 ವರ್ಷ 311 ದಿನಗಳ ದಾಖಲೆ ಮಾಡಿದ್ದರು. ಲೂಯಿಸ್ ಈ ವರ್ಷದ ಫೆಬ್ರವರಿಯಲ್ಲಿ 94ನೇ ವಯಸ್ಸಿನಲ್ಲಿ ನಿಧನರಾದರು.