* ವಿಶ್ವದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ 10 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ದೇಶದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ಬೆಂಗಳೂರು ವಿಮಾನ ನಿಲ್ದಾಣವು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ.* 2023ರಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿರುವ ವಿಮಾನ ನಿಲ್ದಾಣಗಳ ಪಟ್ಟಿಯನ್ನು ವಿಮಾನಯಾನ ವಿಶ್ಲೇಷಣಾ ಸಂಸ್ಥೆಯಾದ ಸಿರಿಯಮ್ ಜನವರಿ 02 ರಂದು ಬಿಡುಗಡೆಗೊಳಿಸಿದೆ.* ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2023 ರಲ್ಲಿ ವಾರ್ಷಿಕ ಆನ್-ಟೈಮ್ ಪರ್ಫಾರ್ಮೆನ್ಸ್ (OTP) ಗಾಗಿ ವಿಶ್ವದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. * ಏವಿಯೇಷನ್ ಅನಾಲಿಟಿಕ್ಸ್ ಸಂಸ್ಥೆ ಸರ್ಕಮ್ ಬಿಡುಗಡೆ ಮಾಡಿದ ವರದಿಯ ಪ್ರಕಾರ ಹೈದರಾಬಾದ್ ವಿಮಾನ ನಿಲ್ದಾಣವು ವಿಶ್ವದ ಎರಡನೇ ಅತ್ಯಂತ ಸಮಯೋಚಿತ ವಿಮಾನ ನಿಲ್ದಾಣವಾಗಿದೆ ಮತ್ತು ಬೆಂಗಳೂರು ವಿಮಾನ ನಿಲ್ದಾಣ ಮುಂದಿನ ಸ್ಥಾನದಲ್ಲಿದೆ.* "ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸಮಯೋಚಿತ ನಿರ್ಗಮನದ ಅನುಭವವನ್ನು ಉಳಿಸಿಕೊಂಡಿದೆ, ಜುಲೈನಲ್ಲಿ 87.51 ಶೇಕಡಾ ಸಮಯಪಾಲನೆ, ಆಗಸ್ಟ್ ನಲ್ಲಿ 89.66 ಶೇಕಡಾ ಮತ್ತು ಸೆಪ್ಟೆಂಬರ್ ನಲ್ಲಿ 88.51 ಶೇಕಡಾ" ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಹೇಳಿಕೆಯಲ್ಲಿ ತಿಳಿಸಿದೆ.