* ಬ್ರೆಜಿಲ್, ಭಾರತ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ ಬ್ರಿಕ್ಸ್‌ಗೆ (BRICS) ಹೊಸದಾಗಿ ಐದು ರಾಷ್ಟ್ರಗಳನ್ನು ಸೇರಿಸಲಾಗಿದೆ.* ಹೊಸದಾಗಿ ಸೇರ್ಪಡೆಗೊಂಡ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳಿಗೆ ಬ್ರಿಕ್ಸ್ ಪೂರ್ಣ ಸದಸ್ಯತ್ವವನ್ನು ನೀಡಿದೆ ಎಂದು ಘೋಷಿಸಲಾಗಿದೆ.* ಬ್ರಿಕ್ಸ್‌ನ ಅಧ್ಯಕ್ಷ ಸ್ಥಾನವನ್ನು ಮಾಸ್ಕೋ ವಹಿಸಿಕೊಂಡ ಬಳಿಕ ರಷ್ಯಾದ ಅಧ್ಯಕ್ಷ ವ್ಹಾಡಿಮಿರ್ ಪುಟಿನ್ ಅವರು ಜನವರಿ 01 ರಂದು 'ಈ ಗುಂಪು 10-ರಾಷ್ಟ್ರಗಳ ಸಂಸ್ಥೆಯಾಗಿ ಮಾರ್ಪಟ್ಟಿದ್ದು, ಹೊಸ ಸದಸ್ಯರಾಗಿ ಐದು ರಾಷ್ಟ್ರಗಳು ಸೇರ್ಪಡೆಗೊಂಡಿವೆ' ಎಂದು ಘೋಷಿಸಿದ್ದಾರೆ.* ಆಗಸ್ಟ್‌ನಲ್ಲಿ ಜೋಹಾನ್ಸ್‌ ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರು ಅರ್ಜೆಂಟೀನಾ ಸೇರಿದಂತೆ ಆರು ದೇಶಗಳನ್ನು ಜನವರಿ 1 ರಿಂದ ಜಾರಿಗೆ ಬರುವಂತೆ ಒಕ್ಕೂಟಕ್ಕೆ ಸೇರಿಸುವ ಪ್ರಸ್ತಾಪವನ್ನು ಅನುಮೋದಿಸಿದ್ದರು.* ಅರ್ಜೆಂಟೀನಾದ ಹೊಸ ಅಧ್ಯಕ್ಷ ಜೇವಿಯರ್ ಮಿಲೀ ಅವರು ತಮ್ಮ ದೇಶವನ್ನು ಬ್ರಿಕ್ಸ್ ಸದಸ್ಯತ್ವದಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು.