* ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಏರೋ ಎಂಜಿನ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಎಇಆರ್‌ಡಿಸಿ)ವನ್ನು ರಕ್ಷಣಾ ಕಾರ್ಯದರ್ಶಿ ಶ್ರೀ ಗಿರಿಧರ್ ಅರಮನೆ ಅವರು ಉದ್ಘಾಟಿಸಿದ್ದರು. * ಎಇಆರ್‌ಡಿಸಿ ಹೊಸ ಎಂಜಿನ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತದೆ. * ಈ ಎಇಆರ್‌ಡಿಸಿಯು 10 ಸಾವಿರ ಚದರ ಮೀಟರ್ ಗಳಷ್ಟು ವಿಸ್ತಾರವಾಗಿದೆ. ಏರೋಸ್ಪೇಸ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನಾವೀನ್ಯತೆ ಹೊಂದಿರುವ ಕೇಂದ್ರ ಇದಾಗಿದೆ. ಇದರಲ್ಲಿ ವಿಶೇಷ ಯಂತ್ರಗಳು, ಸುಧಾರಿತ ಮತ್ತು ಕಂಪ್ಯೂಟೇಶನಲ್ ಉಪಕರಣಗಳಿವೆ. * ಎಚ್.ಎಎಲ್ ಪ್ರಸ್ತುತ ಹಿಂದೂಸ್ತಾನ್ ಟರ್ಬೊ ಫ್ಯಾನ್ ಎಂಜಿನ್ (ಎಚ್‌ಟಿಎಫ್‌ಇ) ಮತ್ತು ಹಿಂದೂಸ್ತಾನ್ ಟರ್ಬೊ ಶಾಫ್ಟ್ ಎಂಜಿನ್ (ಎಚ್‌ಟಿಎಸ್‌ಇ)ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಎಂಜಿನ್‌ಗಳು ಸಣ್ಣ ಯುದ್ಧ ವಿಮಾನಗಳು ಅಥವಾ ಪ್ರಾದೇಶಿಕ ಜೆಟ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.