Job Description: * ಜಾಗತಿಕ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.* 1948 ಏಪ್ರಿಲ್ 07 ರಂದು ವಿಶ್ವ ಆರೋಗ್ಯ ಸಂಘಟನೆ ( WHO ) ಸ್ಥಾಪನೆಯಾದ ವರ್ಷದ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್ 07 ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.* WHO ಗೊತ್ತುಪಡಿಸಿರುವ ವಿವಿಧ ಜಾಗತಿಕ ಸಾರ್ವಜನಿಕ ಆರೋಗ್ಯ ಆಂದೋಲನಗಳಲ್ಲಿ ವಿಶ್ವ ಆರೋಗ್ಯ ದಿನವೂ ಒಂದು. ಈ ವರ್ಷದ ಥೀಮ್ " Health For All " ( ಎಲ್ಲರಿಗೂ ಆರೋಗ್ಯ )..* ವಿಶ್ವ ಆರೋಗ್ಯ ಸಂಸ್ಥೆ ( WHO ) ಗೊತ್ತುಪಡಿಸಿದ 8 ಜಾಗತಿಕ ಸಾರ್ವಜನಿಕ ಆರೋಗ್ಯ ದಿನಾಚರಣೆಗಳು.. - ಮಾರ್ಚ್ 24 - ವಿಶ್ವಕ್ಷಯ ರೋಗ ದಿನಚರಣೆ - ಏಪ್ರಿಲ್ 07 - ವಿಶ್ವ ಆರೋಗ್ಯ ದಿನಾಚರಣೆ - ಏಪ್ರಿಲ್ 25 - ವಿಶ್ವ ಮಲೇರಿಯಾ ದಿನಾಚರಣೆ - ಮೇ 31- ವಿಶ್ವ ತಂಬಾಕು ರಹಿತ ದಿನಾಚರಣೆ - ಜೂನ್ 14 - ವಿಶ್ವ ರಕ್ತದಾನಿಗಳ ದಿನಾಚರಣೆ - ಏಪ್ರಿಲ್ 07 - ವಿಶ್ವ ಆರೋಗ್ಯ ದಿನ / World Health Day.