Job Description: * ವಿಕಿಪಿಡಿಯಾದ ಆನ್ ಲೈನ್ ಮಾಹಿತಿ ಮೂಲಗಳು ಜನಸಮೂಹ ಒದಗಿಸುವ ಮಾಹಿತಿಯನ್ನು ಒದಗಿಸುತ್ತವೆ ಹಾಗೂ ಮಾಹಿತಿಗೆ ಸಂಬಂಧಿಸಿರುವ ವಿಚಾರಗಳನ್ನು ಸೇರ್ಪಡೆ ಮಾಡುವ ಅವಕಾಶವನ್ನು ಬಳಕೆದಾರರಿಗೆ ಒದಗಿಸಿದೆ. ಹಾಗಾಗಿ ವಿಕಿಪೀಡಿಯವನ್ನು ಸಂಪೂರ್ಣವಾಗಿ ಅವಲಂಬಿಸುವಂತಿಲ್ಲ, ಅವು ದಾರಿ ತಪ್ಪಿಸುವಂತಹ ಮಾಹಿತಿಯನ್ನು ನೀಡುವ ಸಾಧ್ಯತೆಯೂ ಇದೆ ಎಂದು ಭಾರತದ ಸುಪ್ರೀಂ ಕೋರ್ಟ್ ಜನೆವರಿ 17 ರಂದು ಅಭಿಪ್ರಾಯಪಟ್ಟಿದೆ.* ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ವಿಕ್ರಂನಾಥ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, 'ವಿಕಿಪಿಡಿಯಾದಂತಹ ಮಾಹಿತಿ ಮೂಲಗಳು ಉಚಿತವಾಗಿ ಜ್ಞಾನ ಒದಗಿಸುತ್ತವೆ, ಆದರೆ ಕಾನೂನು ವಿವಾದಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಇಂತಹ ಮೂಲಗಳನ್ನು ಅವಲಂಬಿಸುವಾಗ ಎಚ್ಚರದಿಂದ ಇರಬೇಕು' ಎಂದು ನ್ಯಾಯಪೀಠ ಹೇಳಿದೆ.