Job Description: * ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್‌ನಲ್ಲಿ ಗ್ಲ್ಯಾಸ್ಗೋದಲ್ಲಿ ನಡೆದ ʻಸಿಒಪಿ 26ʼ ಶೃಂಗಸಭೆಯಲ್ಲಿ ಲೈಫ್ ಪರಿಕಲ್ಪನೆಯನ್ನು ಪರಿಚಯಿಸಿದರು. ಪರಿಸರವನ್ನು ಉಳಿಸಿ, ಸಂರಕ್ಷಿಸುವ ನಿಟ್ಟಿನಲ್ಲಿ "ಸಂಪನ್ಮೂಲಗಳ ವಿವೇಚನಾರಹಿತ ಮತ್ತು ವಿನಾಶಕಾರಿ ಬಳಕೆಯ ಬದಲಿಗೆ ಅವುಗಳ ವಿವೇಚನಾಯುತ ಮತ್ತು ಜವಾಬ್ದಾರಿಯುತ ಬಳಕೆ" ಗಾಗಿ ʻಲೈಫ್‌ʼ ಅಭಿಯಾನವನ್ನು ಒಂದು ಸಾಮೂಹಿಕ ಆಂದೋಲನವಾಗಿ ಮುನ್ನಡೆಸುವಂತೆ ಜಾಗತಿಕ ನಾಯಕರು ಮತ್ತು ಸಂಸ್ಥೆಗಳಿಗೆ ಅವರು ಕರೆ ನೀಡಿದರು. * ಪ್ರಕೃತಿಯ ಪಂಚಭೂತಗಳಾದ - ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶವನ್ನು ಪ್ರತಿನಿಧಿಸುವ ಹಾಗೂ ಭೂಮಿಯ ಮೇಲೆ ಜೀವಸಂಕುಲದ ಸುಸ್ಥಿರತೆಗಾಗಿ ಈ ಪಂಚಭೂತಗಳ ನಡುವೆ ಸಾಮರಸ್ಯ ಸಾಧಿಸುವ ಮಹತ್ವವನ್ನು ಸಾರುವ ಉದ್ದೇಶದಿಂದ ಈ ಅಭಿಯಾನವನ್ನು ರೂಪಿಸಲಾಗಿದೆ. * 'ಅಗ್ನಿ ತತ್ತ್ವ' ಕಾರ್ಯಕ್ರಮವನ್ನು ಜನರ ಬಳಿಗೆ ಕೊಂಡೊಯ್ಯಲು ಮುಂದಾಳತ್ವ ವಹಿಸಬೇಕೆಂದು ʻಪವರ್ ಫೌಂಡೇಶನ್ ಆಫ್ ಇಂಡಿಯಾʼಗೆ(ಪಿಎಫ್ಐ) ಇಂಧನ ಸಚಿವಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ 'ಅಗ್ನಿ ತತ್ವʼ ಕುರಿತು ರಾಷ್ಟ್ರಮಟ್ಟದ ಅಭಿಯಾನವನ್ನು ನಡೆಸಲು ವಿಜ್ಞಾನ ಭಾರತಿ (VIBHA) ಜೊತೆ ʻಪಿಎಫ್ಐʼ ಕೈಜೋಡಿಸಿದೆ. * ʻಪವರ್ ಫೌಂಡೇಶನ್ ಆಫ್ ಇಂಡಿಯಾʼ, ʻಅಗ್ನಿʼ ಅಡಿಯಲ್ಲಿ ಬರುವ ವಿಷಯಗಳಾದ ಇಂಧನ ಭದ್ರತೆ, ಜವಾಬ್ದಾರಿಯುತ ಬಳಕೆ, ಪರಿಸರ, ಆರೋಗ್ಯ, ನಗರೀಕರಣ, ಸಾರಿಗೆ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ವಿಚಾರ ಸಂಕಿರಣಗಳು, ಸಮ್ಮೇಳನಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.