* ಭಾರತದ ಟೆನಿಸ್‌ ದಿಗ್ಗಜರಾದ ವಿಜಯ್ ಅಮೃತರಾಜ್ ಮತ್ತು ಲಿಯಾಂಡರ್ ಪೇಸ್ ಅವರಿಗೆ ಅಂತರರಾಷ್ಟ್ರೀಯ ಟೆನಿಸ್ ಹಾಲ್‌ ಆಫ್‌ ಫೇಮ್ ಗೌರವ ನೀಡಲಾಗಿದೆ. ಈ ಗೌರವಕ್ಕೆ ಪಾತ್ರರಾದ ಏಷ್ಯಾದ ಮೊದಲ ಟೆನಿಸ್ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾದರು.* 18 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಹೊಂದಿರುವ ಲಿಯಾಂಡರ್ ಪೇಸ್ ಅವರನ್ನು ಆಟಗಾರರ ವಿಭಾಗದಲ್ಲಿ ಗೌರವಿಸಿದರೆ, ಯಶಸ್ವಿ ಪ್ರಸಾರಕ ಮತ್ತು ಪ್ರಚಾರಕ ವಿಜಯ್ ಅಮೃತರಾಜ್ ಕೊಡುಗೆದಾರರ ವಿಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅವರ ಪ್ರವೇಶವು ಭಾರತಕ್ಕೆ ಮಹತ್ವದ ಸಾಧನೆಯನ್ನು ಸೂಚಿಸುತ್ತದೆ.* ಪೇಸ್ ಅವರನ್ನು ಆಟಗಾರರ ವಿಭಾಗದಲ್ಲಿ, ಅಮೃತರಾಜ್ ಅವರನ್ನು ಟೆನಿಸ್‌ಗೆ ನೀಡಿದ ಗಣನೀಯ ಕೊಡುಗೆಗಾಗಿ "ಕಾಂಟ್ರಿಬ್ಯೂಟರ್ ಕೆಟಗರಿ'ಯಲ್ಲಿ ಆಯ್ಕೆ ಮಾಡಲಾಗಿದೆ. * ವಿಜಯ ಅಮೃತರಾಜ್ ಮತ್ತು ಫೇಸ್ ಅವರ ಸೇರ್ಪಡೆಯಿಂದ ಹಾಲ್ ಆಫ್ ಫೇಮ್ ಅನ್ನು 28 ರಾಷ್ಟ್ರಗಳ 267 ಆಟಗಾರರು ಪ್ರತಿನಿಧಿಸಿದಂತಾಗಿದೆ' ಎಂದು ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ ಪ್ರಕಟಣೆ ತಿಳಿಸಿದೆ.