* 2024ರ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಆತಿಥ್ಯ ವಹಿಸುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನವೆಂಬರ್ 21ರಂದು ತಿಳಿಸಿದೆ.* ಮುಂದಿನ ವರ್ಷ ಶ್ರೀಲಂಕಾದಲ್ಲಿ ನಿಗದಿಯಾಗಿದ್ದ 19 ವರ್ಷದೊಳಗಿನ ಪುರುಷರ ವಿಶ್ವ ಕಪ್‌ ಟೂರ್ನಿಯ ಆತಿಥ್ಯವನ್ನು ಐಸಿಸಿಯು ದಕ್ಷಿಣ ಆಫ್ರಿಕಕ್ಕೆ ಸ್ಥಳಾಂತರಿಸಿದೆ.* ಶ್ರೀಲಂಕಾ ಕ್ರಿಕೆಟ್‌ನ (ಎಸ್‌ಎಲ್‌ಸಿ) ಕಾರ್ಯಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪದ ಕಾರಣಕ್ಕಾಗಿ ಅಲ್ಲಿನ ಕ್ರಿಕೆಟ್ ಮಂಡಳಿಯನ್ನು ಅಮಾನತು ಮಾಡಿದ 11 ದಿನಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ನಿರ್ಧಾರ ಕೈಗೊಂಡಿದೆ.* ಜನವರಿ 14 ರಿಂದ ಫೆಬ್ರವರಿ 15 ರವರೆಗೆ ಅಂಡರ್ 19 ವಿಶ್ವಕಪ್ ನಡೆಯಬೇಕಿತ್ತು. ಜನವರಿ 10 ರಿಂದ ಫೆಬ್ರವರಿ 10 ರವರೆಗೆ ನಡೆಯಲಿರುವ ಎಸ್ಎ 20 ನ ಎರಡನೇ ಆವೃತ್ತಿಯೊಂದಿಗೆ ದಿನಾಂಕಗಳು ಮುಖಾಮುಖಿಯಾಗಲಿವೆ. * ಟಿ20 ಲೀಗ್’ನ್ನ ಸಿಎಸ್ಎಯಿಂದ ಸ್ವತಂತ್ರ ಸಂಸ್ಥೆ ಸ್ವಾಯತ್ತವಾಗಿ ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಎರಡು ಪಂದ್ಯಾವಳಿಗಳನ್ನ ಏಕಕಾಲದಲ್ಲಿ ನಡೆಸಬಹುದು ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.