Job Description: * ಭಾರತದ ಪಂಕಜ್‌ ಅಡ್ವಾಣಿ ಅವರು ದೋಹಾದಲ್ಲಿ ನಡೆದ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಕಿರೀಟ ಮುಡಿಗೇರಿಸಿಕೊಂಡರು. ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ನಲ್ಲಿ ಅವರು ಈ ಮೂಲಕ ದಾಖಲೆಯ 26ನೇ ಬಾರಿಗೆ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಂಗಳವಾರ ನಡೆದ ಫೈನಲ್‌ನಲ್ಲಿ ಪಂಕಜ್‌ 1000– 416 ರಿಂದ ಭಾರತದವರೇ ಆದ ಸೌರವ್‌ ಕೊಠಾರಿ ಅವರನ್ನು ಮಣಿಸಿದರು. * ಪಂಕಜ್‌ ಅವರು 2005 ರಲ್ಲಿ ತಮ್ಮ ಮೊದಲ ವಿಶ್ವ ಚಾಂಪಿಯನ್‌ಪಿಪ್‌ ಗೆದ್ದುಕೊಂಡಿದ್ದರು.* ಭಾರತದ ಪಂಕಜ್‌ ಅಡ್ವಾಣಿ ಅವರು ಒಂಬತ್ತು ಬಾರಿ 'ಲಾಂಗ್ ಫಾರ್ಮ್ಯಾಟ್ ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೆ ಎಂಟು ಬಾರಿ 'ಪಾಯಿಂಟ್ ಫಾರ್ಮ್ಯಾಟ್' ಚಾಂಪಿಯನ್‌ಶಿಪ್‌ನಲ್ಲಿ ಜಯಗಳಿಸಿದ್ದಾರೆ ಮತ್ತು ಒಮ್ಮೆ ವಿಶ್ವ ಟೀಮ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ.