Job Description: ➤ ಜಾಗತಿಕ ಮಟ್ಟದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿ, ಕರ್ತವ್ಯದ ಅವಧಿಯಲ್ಲಿ ವೀರಮರಣ ಅಪ್ಪಿದ ಭಾರತದ ಇಬ್ಬರು ವೀರ ಶಾಂತಿಪಾಲಕರಿಗೆ ಲ್ಯಾನ್ಸ್ ಹವಿಲ್ದಾರ್ ಹರಭಜನ್ ಸಿಂಗ್ ಮತ್ತು ನಾಯಬ್ ಸುಬೇದಾರ್ ಸುಜಿತ್ ಕುಮಾರ್ ಪ್ರಧಾನ್.(Peacekeepers) ವಿಶ್ವಸಂಸ್ಥೆಯು (United Nations) ಮರಣೋತ್ತರ ಗೌರವ ಸಮರ್ಪಿಸಿದೆ. ‘ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಶಾಂತಿಪಾಲಕರ ದಿನಾಚರಣೆ’ಯ ಅಂಗವಾಗಿ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರೊಂದಿಗೆ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಭಾರತೀಯ ಸೇನೆಯ ಮೇಜರ್ ಅಭಿಲಾಷಾ ಬರಕ್ ಅವರಿಗೆ ಜಾಗತಿಕ ಮಟ್ಟದ ಅತ್ಯುನ್ನತ ಸೇನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.➤ ಹುತಾತ್ಮ ವೀರರಿಗೆ ‘ಡಾಗ್ ಹ್ಯಾಮರ್‌ಸ್ಜೋಲ್ಡ್ ಪದಕ’: ವಿಶ್ವಸಂಸ್ಥೆಯ ವಿವಿಧ ಮಿಷನ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ವೀರಮರಣ ಹೊಂದಿದ ಭಾರತೀಯ ಸೈನಿಕರ ತ್ಯಾಗವನ್ನು ಸ್ಮರಿಸಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಈ ಗೌರವವನ್ನು ಘೋಷಿಸಿದ್ದಾರೆ: ಲ್ಯಾನ್ಸ್ ಹವಿಲ್ದಾರ್ ಹರಭಜನ್ ಸಿಂಗ್ (Lance Havildar Harbhajan Singh): ಇವರು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿನ ವಿಶ್ವಸಂಸ್ಥೆಯ ಸ್ಥಿರೀಕರಣ ಮಿಷನ್ (MONUSCO) ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಯಬ್ ಸುಬೇದಾರ್ ಸುಜಿತ್ ಕುಮಾರ್ ಪ್ರಧಾನ್ (Naib Subedar Sujit Kumar Pradhan): ಇವರು ದಕ್ಷಿಣ ಸುಡಾನ್‌ನಲ್ಲಿನ ವಿಶ್ವಸಂಸ್ಥೆಯ ಮಿಷನ್ (UNMISS) ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹುತಾತ್ಮರಾಗಿದ್ದರು. ‘ಡಾಗ್ ಹ್ಯಾಮರ್‌ಸ್ಜೋಲ್ಡ್ ಪದಕ’ ಎಂಬುದು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡ ಮಿಲಿಟರಿ, ಪೊಲೀಸ್ ಅಥವಾ ನಾಗರಿಕ ಸಿಬ್ಬಂದಿಗೆ ಮರಣೋತ್ತರವಾಗಿ ನೀಡಲಾಗುವ ಅತ್ಯುನ್ನತ ಜಾಗತಿಕ ಗೌರವವಾಗಿದೆ. ➤ ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆಯಲ್ಲಿ (UNIFIL) ಮಹಿಳಾ ಸಬಲೀಕರಣ ಮತ್ತು ಲಿಂಗ ಸೂಕ್ಷ್ಮತೆಗಾಗಿ ಅತ್ಯುತ್ತಮ ಕೊಡುಗೆ ನೀಡಿದ ಮೇಜರ್ ಅಭಿಲಾಷಾ ಬರಕ್ ಅವರಿಗೆ '2025ರ ವರ್ಷದ ಮಿಲಿಟರಿ ಜೀಂಡರ್ ಅಡ್ವೊಕೇಟ್' (Military Gender Advocate of the Year) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಇವರು ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಫೀಮೇಲ್ ಎಂಗೇಜ್‌ಮೆಂಟ್ ಟೀಮ್ (FET) ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಹಾಗೆ, ಮೇಜರ್ ಅಭಿಲಾಷಾ ಬರಕ್ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಯುದ್ಧ ಹೆಲಿಕಾಪ್ಟರ್ ಪೈಲಟ್ (First Woman Combat Helicopter Pilot) ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಈ ಪ್ರತಿಷ್ಠಿತ ವಿಶ್ವಸಂಸ್ಥೆಯ ಗೌರವವನ್ನು ಪಡೆಯುತ್ತಿರುವ ಭಾರತದ ಮೂರನೇ ಮಹಿಳಾ ಅಧಿಕಾರಿ ಇವರಾಗಿದ್ದಾರೆ (ಇದಕ್ಕೂ ಮುನ್ನ ಮೇಜರ್ ಸುಮನ್ ಗವಾನಿ ಮತ್ತು ಮೇಜರ್ ರಾಧಿಕಾ ಸೇನ್ ಈ ಪ್ರಶಸ್ತಿ ಪಡೆದಿದ್ದರು).➤ ವಿಶ್ವಸಂಸ್ಥೆಯ ಶಾಂತಿಪಾಲನೆಯಲ್ಲಿ ಭಾರತದ ಪಾತ್ರ: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಜಾಗತಿಕವಾಗಿ ಅತಿ ಹೆಚ್ಚು ಸೈನಿಕರನ್ನು ಕಳೆದುಕೊಂಡ ದೇಶ ಭಾರತವಾಗಿದೆ. ಇದುವರೆಗೆ ಸುಮಾರು 180 ಭಾರತೀಯ ಶಾಂತಿಪಾಲಕರು ವಿಶ್ವ ಶಾಂತಿಗಾಗಿ ಪರಮೋಚ್ಚ ತ್ಯಾಗ ಮಾಡಿದ್ದಾರೆ. ವಿಶ್ವಸಂಸ್ಥೆಯ ಮಿಷನ್‌ಗಳಿಗೆ ಅತಿ ಹೆಚ್ಚು ಸೈನಿಕರನ್ನು ಕಳುಹಿಸುವ ದೇಶಗಳ ಪಟ್ಟಿಯಲ್ಲಿ ಭಾರತವು ಎರಡನೇ ದೊಡ್ಡ ದೇಶವಾಗಿದೆ. ಪ್ರಸ್ತುತ ಅಬ್ಯೆ (Abyei), ಸೈಪ್ರಸ್, ಕಾಂಗೋ, ಲೆಬನಾನ್, ಸೊಮಾಲಿಯಾ, ದಕ್ಷಿಣ ಸುಡಾನ್ ಮತ್ತು ಪಶ್ಚಿಮ ಸಹಾರಾ ಸೇರಿದಂತೆ ವಿವಿಧ ದೇಶಗಳಲ್ಲಿ 155 ಮಹಿಳಾ ಸಿಬ್ಬಂದಿ ಒಳಗೊಂಡಂತೆ ಒಟ್ಟು 4,200 ಕ್ಕೂ ಹೆಚ್ಚು ಭಾರತೀಯ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿ ಜಾಗತಿಕ ಶಾಂತಿ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.