Job Description: ➤ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಭಾಗವಾಗಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಲ್ಲಾಸ್ (ULLAS) ಯೋಜನೆಯಡಿ, ಹಿಮಾಲಯದ ಸಣ್ಣ ರಾಜ್ಯವಾದ ಸಿಕ್ಕಿಂ ಭಾರತದ 5ನೇ ಸಂಪೂರ್ಣ ಸಾಕ್ಷರತಾ ರಾಜ್ಯ (Fully Literate State) ಎಂದು ಅಧಿಕೃತವಾಗಿ ಘೋಷಿಸಲ್ಪಟ್ಟಿದೆ. ಗ್ಯಾಂಗ್ಟಕ್‌ನಲ್ಲಿ ನಡೆದ ಸಿಕ್ಕಿಂ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ಈ ಐತಿಹಾಸಿಕ ಘೋಷಣೆಯನ್ನು ಮಾಡಲಾಯಿತು. ಈ ಸಾಧನೆಯೊಂದಿಗೆ ಈಶಾನ್ಯ ಭಾರತದ (Northeast Region) ಮೂರನೇ ಸಂಪೂರ್ಣ ಸಾಕ್ಷರ ರಾಜ್ಯ ಎಂಬ ಹೆಗ್ಗಳಿಕೆಗೂ ಸಿಕ್ಕಿಂ ಪಾತ್ರವಾಗಿದೆ. ➤ ಭಾರತದ ಸಂಪೂರ್ಣ ಸಾಕ್ಷರತಾ ರಾಜ್ಯಗಳ ಪಟ್ಟಿ (Top 5 Fully Literate States): ಮಿಜೋರಾಂ: ಈ ಮೈಲಿಗಲ್ಲು ತಲುಪಿದ ಭಾರತದ ಮೊದಲ ರಾಜ್ಯ (ಈಶಾನ್ಯ ವಲಯ) ಗೋವಾ: ಪಶ್ಚಿಮ ಕರಾವಳಿ ವಲಯದ ಅತ್ಯುನ್ನತ ಸಾಕ್ಷರ ರಾಜ್ಯ ತ್ರಿಪುರಾ: ಈಶಾನ್ಯ ಭಾರತದ ಎರಡನೇ ಸಂಪೂರ್ಣ ಸಾಕ್ಷರ ರಾಜ್ಯ ಹಿಮಾಚಲ ಪ್ರದೇಶ: ಉತ್ತರ ಭಾರತದ ಪ್ರಮುಖ ಸಾಕ್ಷರ ರಾಜ್ಯ ಸಿಕ್ಕಿಂ: ಪ್ರಸ್ತುತ 2026 ರಲ್ಲಿ ಸಾಧನೆ ಮಾಡಿದ 5ನೇ ರಾಜ್ಯ (ಈಶಾನ್ಯದ 3ನೇ ರಾಜ್ಯ) ➤ ಉಲ್ಲಾಸ್ (ULLAS) ಯೋಜನೆ: ಉಲ್ಲಾಸ್ (ULLAS) ಎಂಬುದು ಕೇಂದ್ರ ಶಿಕ್ಷಣ ಸಚಿವಾಲಯದ 'ನವ ಭಾರತ ಸಾಕ್ಷರತಾ ಕಾರ್ಯಕ್ರಮ' ಮತ್ತು NEP 2020 ರ ಅಡಿಯಲ್ಲಿದ್ದೂ, ಇದು 15 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಶಿಕ್ಷಣ ವಂಚಿತ ನಾಗರಿಕರಲ್ಲಿ ಮೂಲಭೂತ ಓದು-ಬರಹ, ಕ್ರಿಯಾತ್ಮಕ ಸಾಕ್ಷರತೆ ಮತ್ತು ಜೀವನಪರ್ಯಂತ ಕಲಿಕೆಯನ್ನು ಉತ್ತೇಜಿಸುವ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.➤ ಭೌಗೋಳಿಕವಾಗಿ ಕಠಿಣ ಭೂಪ್ರದೇಶವನ್ನು ಹೊಂದಿದ್ದರೂ, ಸಿಕ್ಕಿಂ ರಾಜ್ಯವು ಗ್ರಾಮೀಣ ಸ್ವಯಂಸೇವಕರು ಮತ್ತು ಅಧಿಕಾರಿಗಳ ಸಮನ್ವಯತೆಯೊಂದಿಗೆ ತಳಮಟ್ಟದ ಸಮುದಾಯಗಳನ್ನು ಒಟ್ಟುಗೂಡಿಸಿ, ದುರ್ಗಮ ಹಳ್ಳಿಗಳ ಹಿರಿಯ ನಾಗರಿಕರಿಗಾಗಿ ವಿಶೇಷ ಶಿಕ್ಷಣ ಶಿಬಿರಗಳನ್ನು ಆಯೋಜಿಸುವ ಮೂಲಕ ಈ ಐತಿಹಾಸಿಕ ಸಾಕ್ಷರತಾ ಮೈಲಿಗಲ್ಲನ್ನು ಸಾಧಿಸಿದೆ.➤ ಈ ಯಶಸ್ಸಿನ ಕುರಿತು ಮಾತನಾಡಿದ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ (ಗೋಲೆ), "ಸಾಕ್ಷರತೆ ಎನ್ನುವುದು ಕೇವಲ ಓದು-ಬರಹವಲ್ಲ; ಅದು ಸಬಲೀಕರಣ, ಆತ್ಮವಿಶ್ವಾಸ, ಸಾಮಾಜಿಕ ಸಮಾನತೆ ಮತ್ತು ಪ್ರಗತಿಯ ಭದ್ರ ಬುನಾದಿಯಾಗಿದೆ" ಎಂದು ಬಣ್ಣಿಸಿದ್ದಾರೆ.