* ಟರ್ಕಿಯ ಅಧ್ಯಕ್ಷರಾಗಿ ರೆಸೆಪ್ ತಯ್ಯಿಪ್ ಎರ್ಡೊಗನ್ ರವರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತಎಣಿಕೆ ಪ್ರಕ್ರಿಯೆಯು ಶೇ 99 ರಷ್ಟು ಮೂಡಿದ್ದು, ಅನಧಿಕೃತ ಮಾಹಿತಿ ಪ್ರಕಾರ ಎರ್ಡೊಗನ್ ರವರ ಪರವಾಗಿ 52 ರಷ್ಟು ಮತಗಳನ್ನು ಪಡೆದು ಮೂರನೇ ಭಾರಿ ಟರ್ಕಿ ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತ್ತು.* ಭೀಕರ ಭೂಕಂಪ, ಹೆಚ್ಚಿದ ಹಣ ದುಬ್ಬರದ ಮಧ್ಯೆಯೂ ಎರ್ಡೊಗನ್ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 2017ರಲ್ಲಿ ಏಪ್ರಿಲ್‍ನಲ್ಲಿ ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ನೂತನ ಸಂವಿಧಾನದ ಪ್ರಕಾರ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.