* ಗೋವಾದ ಖ್ಯಾತ ಸಾಹಿತಿಯಾದ 79 ವರ್ಷದ ವಯಸ್ಸಿನ ದಾಮೋದರ್‌ ಮೌಜೊ ಅವರಿಗೆ ಪಣಜಿಯಲ್ಲಿ ಮೇ 28 ರಂದು (ಭಾನುವಾರ) ಗೋವಾ ರಾಜ್ಯಪಾಲರಾದ ಪಿ. ಎಸ್‌ ಶ್ರೀಧರನ್‌ ಪಿಳ್ಳೈ ಯವರು ದಾಮೋದರ್‌ ಮೌಜೊ ರವರಿಗೆ ಪ್ರತಿಷ್ಠಿತ  ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. * ಜ್ಞಾನಪೀಠ ಪಡೆಯುತ್ತಿರುವ ಗೋವಾದ ಎರಡನೇ ಸಾಹಿತಿ ಇವರಾಗಿದ್ದು, ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಥಾ ಪ್ರಶಸ್ತಿ, ವಿವಿ ಪೈ ಸಾಹಿತ್ಯ ಪುರಸ್ಕಾರ ಸೇರಿದಂತೆ ಹಲವಾರು ಸಾಹಿತ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.