* ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಟಿಕ್ ಟಾಕ್ ಅನ್ನು ನಿಷೇಧಿಸುವ ವಿಧೇಯಕವನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ ಮಾರ್ಚ್ 13 ರಂದು (ಬುಧವಾರ) ಅಂಗೀಕರಿಸಿದೆ. * ಸದನದಲ್ಲಿ ಮತ ಚಲಾವಣೆ ವೇಳೆ ಟಿಕ್ ಟಾಕ್ ನಿಷೇದ ಮಸೂದೆ ಪರವಾಗಿ 352 ವಿರುದ್ಧವಾಗಿ 65 ಮತಗಳು ಚಲಾವಣೆಯಾಗಿದ್ದು, ಅಂತಿಮವಾಗಿ ಬಹುಮತದೊಂದಿಗೆ ಸದನವು ವಿಧೇಯಕವನ್ನು ಅನುಮೋದಿಸಿತು. * ಟಿಕ್‌ಟಾಕ್ ಪ್ರಸ್ತುತ 170 ಮಿಲಿಯನ್‌ಗಿಂತಲೂ ಹೆಚ್ಚು ಅಮೇರಿಕನ್ ಬಳಕೆದಾರರನ್ನು ಹೊಂದಿದೆ ಮತ್ತು ಯುಎಸ್‌ನ ಶಾಸಕರು ಮನವಿ ಮಾಡಿದಂತೆ 'ಒಟ್ಟು ನಿಷೇಧ'ದ ಸಂದರ್ಭದಲ್ಲಿ ಈ ಎಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸಬಹುದು.* ಟಿಕ್ ಟಾಕ್ ಸೇರಿದಂತೆ ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಕುರಿತು ಯುಎಸ್‌ನಲ್ಲಿ ಚರ್ಚೆ ನಡೆಸುತ್ತಿರುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ. ಹಾಗೂ ಸುಮಾರು 15 ಕೋಟಿ ಅಮೆರಿಕನ್ ಬಳಕೆದಾರರನ್ನು ಈ ಆ್ಯಪ್ ಅನ್ನು ಹೊಂದಿದ್ದಾರೆ. * ರಾಷ್ಟ್ರೀಯ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿರುವ ವಿಧೇಯಕ ಚೀನೀ ಮೂಲದ ಬೈಟ್ ಡ್ಯಾನ್ಸ್ ಸಂಸ್ಥೆ 165 ದಿನಗಳಲ್ಲಿ ಟಿಕ್‌ಟಾಕ್ ಅನ್ನು ತ್ಯಜಿಸಬೇಕು ಅಥವಾ ಅಮೆರಿಕವನ್ನು ತೊರೆಯಬೇಕು ಎಂಬುದನ್ನು ವಿಧೇಯಕ ಉಲ್ಲೇಖಿಸಿದೆ. * ರಾಷ್ಟ್ರೀಯ ಭದ್ರತೆಗೆ ಸಂಬಂಧ ಈ ಹಿಂದೆ 2020ರಲ್ಲೇ ಟಿಕ್‌ಟಾಕ್ ನಿಷೇಧಿಸುವಲ್ಲಿ ಭಾರತ ಮುನ್ನಡೆ ಸಾಧಿಸಿದೆ.