* ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಾಜ್ಯಸಭೆ ಸದಸ್ಯೆಯಾಗಿ ಗುರುವಾರ (ಮಾರ್ಚ್14 ) ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್‌ ಅವರು ಸಂಸತ್ ಭವನದಲ್ಲಿ ಸುಧಾ ಮೂರ್ತಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನದಂದು ಕೇಂದ್ರ ಸರ್ಕಾರ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.* ರಾಜ್ಯಸಭೆ ಸದಸ್ಯರಾಗಿ ಸುಧಾಮೂರ್ತಿ ಪ್ರಮಾಣ ವಚನ ಸ್ವೀಕಾರದವೇಳೆ ರಾಜ್ಯಸಭಾ ನಾಯಕ ಪಿಯೂಷ್‌ ಗೋಯೆಲ್‌ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಸುಧಾ ಮೂರ್ತಿ ಅವರ ಪತಿ ನಾರಾಯಣ ಮೂರ್ತಿ ಕೂಡ ಹಾಜರಿದ್ದರು.* 73 ವರ್ಷದ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆಯಾಗಿದ್ದು ಹಲವು ಪುಸ್ತಕಗಳ ಲೇಖಕಿಯಾಗಿ, ವಿಶೇಷವಾಗಿ ಮಕ್ಕಳ ಪುಸ್ತಕ ಬರೆದು ಜನಪ್ರಿಯರಾಗಿದ್ದಾರೆ. * ಮೂಲತಃ ಹುಬ್ಬಳ್ಳಿ ಕಡೆಯವರಾದ ಸುಧಾಮೂರ್ತಿಯವರಿಗೆ ಕನ್ನಡ ಭಾಷೆಯೆಂದರೆ ವಿಶೇಷ ಒಲವು. ಇವರು ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದರು. * ಸುಧಾಮೂರ್ತಿಯವರು ಸಾಹಿತ್ಯ ಅಕಾಡೆಮಿ, ಬಾಲ ಸಾಹಿತ್ಯ ಪುರಸ್ಕಾರ, ಪದ್ಮಶ್ರೀ (2006) ಮತ್ತು ಪದ್ಮಭೂಷಣ (2023) ಪುರಸ್ಕೃತರಾಗಿದ್ದಾರೆ.