* ದೇಶಾದ್ಯಂತ ನಾಯಿಗಳಿಂದ ಜನರ ಮೇಲೆ ದಾಳಿ ಹಾಗೂ ವಿದೇಶಿ ತಳಿಗಳ ಅಕ್ರಮ ವ್ಯಾಪಾರ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಪಿಟ್‌ಬುಲ್‌ ಟೆರಿಯರ್‌, ಅಮೆರಿಕನ್‌ ಬುಲ್‌ಡಾಗ್‌, ಕಂಗಾಲ್‌, ರಷ್ಯನ್‌ ಶೆಫರ್ಡ್‌ ಸೇರಿದಂತೆ 23 ಬಗೆಯ ಅಪಾಯಕಾರಿ ವಿದೇಶಿ ಶ್ವಾನ ತಳಿಗಳನ್ನು ಕೇಂದ್ರ ಸರಕಾರ ಮಾರ್ಚ್ 13 ರಂದು (ಬುಧವಾರ) ನಿಷೇಧ ಹೇರಿದೆ.* ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ.ಒ.ಪಿ.ಚೌಧರಿ ಅವರು ಈ ಕುರಿತು, ಎಲ್ಲ ರಾಜ್ಯಗಳಿಗೆ ರಾಜ್ಯ ಪತ್ರಗಳ ಮೂಲಕ ತಿಳಿಸಿದ್ದಾರೆ .* ಪಿಟ್‌ಬುಲ್‌ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫೋರ್ಡ್‌ಶೈರ್ ಟೆರಿಯರ್, ಡೋಗೊ ಅರ್ಜೆಂಟಿನೊ, ರಷ್ಯನ್‌ ಶೆಫರ್ಡ್, ರೋಡೆಷಿಯನ್ ರಿಜ್‌ಬ್ಯಾಕ್, ವೋಲ್ಫ್‌ ಡಾಗ್ಸ್, ಮಾಸ್ಕೊ ಗಾರ್ಡ್‌ ಡಾಗ್ ನಿಷೇಧಿಸಲಾಗಿರುವ 23 ಪ್ರಮುಖ ನಾಯಿ ತಳಿಗಳಾಗಿವೆ.* ಕೇಂದ್ರ ಸರ್ಕಾರವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ನಾಯಿ ಸಾಕಣೆ ಮತ್ತು ಮಾರುಕಟ್ಟೆ) ನಿಯಮಗಳು 2017 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ (ಪೆಟ್ ಶಾಪ್) ನಿಯಮಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಕರೆ ನೀಡಿತು. * ಪ್ರಾಣಿ ದಯಾ ಸಂಘ ಪೇಟಾದ ಮನವಿ ನೇರೆಗೆ ನಾಯಿ ತಳಿಗಳ ನಿಷೇಧದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.