* ಪ್ರತಿ ವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. 2024ರ ವಿಶ್ವ ಗ್ರಾಹಕ ಹಕ್ಕುಗಳ ದಿನದ ಥೀಮ್ : "ಗ್ರಾಹಕರಿಗೆ ನ್ಯಾಯೋಚಿತ ಮತ್ತು ಜವಾಬ್ದಾರಿಯುತ AI" ಎಂಬುವುದಾಗಿದೆ.  * ಗ್ರಾಹಕರ ಹಕ್ಕುಗಳ ಮಹತ್ವವನ್ನು ಸಾರುವ ನಿಟ್ಟಿನಲ್ಲಿ, ಪ್ರತಿ ವರ್ಷ ಒಂದೊಂದು ಥೀಮ್ ನೊಂದಿಗೆ ಜಾಗತಿಕವಾಗಿ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.* 1983ರಲ್ಲಿ ಮೊದಲ ಬಾರಿಗೆ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 15ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. 1962ರ ಮಾರ್ಚ್ 15ರಂದು ಅಂದಿನ ಅಮೆರಿಕ ಅಧ್ಯಕ್ಷ ಜಾನ್ ಎಫ್.ಕೆನಡಿ ಯುಎಸ್ ಕಾಂಗ್ರೆಸ್‌ಗೆ ವಿಶೇಷ ಹಕ್ಕುಗಳ ಸಮಸ್ಯೆಯ ವಿಚಾರದ ಬಗ್ಗೆ ಚರ್ಚೆ ನಡೆಸಿದರು. ಈ ಮೂಲಕ ಗ್ರಾಹಕರ ಹಕ್ಕುಗಳ ವಿಷಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಮೊದಲ ವಿಶ್ವನಾಯಕರಾಗಿ ಜಾನ್ ಎಫ್.ಕೆನಡಿ ಅವರು ಗುರುತಿಸಿಕೊಂಡರು.* 1986 ಡಿಸೆಂಬರ್ 24 ರಂದು ಭಾರತದಲ್ಲಿ ಗ್ರಾಹಕರ ಹಕ್ಕುಗಳ ದಿನವನ್ನು ಅಧಿಕೃತವಾಗಿ ಆಚರಣೆ ಮಾಡಲಾಯಿತು ಅಂದಿನಿಂದ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ.