* ಸೌದಿ ಸ್ಮ್ಯಾಶ್ ಪಂದ್ಯಾವಳಿಯ ಯಶಸ್ಸಿನ ನಂತ್ರ ಮಣಿಕಾ ಬಾತ್ರಾ ವಿಶ್ವ ಸಿಂಗಲ್ಸ್ ಶ್ರೇಯಾಂಕದಲ್ಲಿ 24ನೇ ಸ್ಥಾನಕ್ಕೆ ಪಡೆದುಕೊಂಡಿದ್ದಾರೆ. ವಿಶ್ವ ಶ್ರೇಯಾಂಕದಲ್ಲಿ ಅಗ್ರ 25 ರೊಳಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ* ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆಯಾಗಿರುವ ಮಣಿಕಾ ಅವರು ವಿಶ್ವ ಶ್ರೇಯಾಂಕದಲ್ಲಿ 39ನೇ ಸ್ಥಾನದಲ್ಲಿದ್ದರು. ಜೆಡ್ಡಾದಲ್ಲಿ ಕಳೆದ ವಾರ ನಡೆದ ಸೌದಿ ಸ್ಮಾಶ್ ಟೂರ್ನಿಯಲ್ಲಿ ಅಗ್ರ ಆಟಗಾರ್ತಿಯರ ವಿರುದ್ಧ ಗಳಿಸಿದ ಗೆಲುವುಗಳಿಂದ ಮಣಿಕಾ ಅವರು 24ನೇ ಸ್ಥಾನಕ್ಕೆ ಪಡೆದಿಕೊಂಡಿದ್ದಾರೆ* 'ಪ್ಯಾರಿಸ್ ಒಲಿಂಪಿಕ್ಸ್‌ ಸಮೀಪಿ ಸುತ್ತಿರುವಾಗ ಇಂಥ ಪ್ರದರ್ಶನ ಮುಂದುವರಿಸಿ ದೇಶ ಹೆಮ್ಮೆಪಡುವಂತೆ ಮಾಡಲು ಮತ್ತು ರ‍್ಯಾಂಕಿಂಗ್ ನಲ್ಲಿ ಇನ್ನಷ್ಟು ಎತ್ತರಕ್ಕೆ ಏರಲು ಪ್ರೇರಣೆ ದೊರೆತಿದೆ, ನಾನು ಅದಕ್ಕೆ ಬದ್ಧಳಾಗಿದ್ದೇನೆ' ಎಂದು ಮಾಣಿಕವರು ತಿಳಿಸಿದ್ದಾರೆ.  ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಾತ್ರಾ, ತಮ್ಮ ಕೋಚ್ ಅಮನ್ ಬಾಲ್ಕಿಯು ಮತ್ತು ಅಭ್ಯಾಸದ ಜೊತೆಗಾರ ಕಿರಿಲ್ ಬಾರ್ಬಾನೋವ್ ಅವರಿಗೆ ಧನ್ಯವಾದ ಹೇಳಿದ್ದರು.* 2018ರ ಕಾಮನ್ವೆಲ್ತ್‌ ಗೇಮ್ಸ್‌ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮಣಿಕಾ, ಕಳೆದ ವರ್ಷ ಹಾಂಗ್‌ಝ ಏಷ್ಯನ್ ಗೇಮ್ಸ್‌ ನಲ್ಲಿ ಮಹಿಳಾ ಸಿಂಗಲ್ಸ್ ಎಂಟರ ಘಟ್ಟ ತಲುಪಿ ಗಮನ ಸೆಳೆದಿದ್ದರು.