Job Description: * ಮಧ್ಯಪ್ರದೇಶ ರಾಜಧಾನಿಯಾದ ಭೋಪಾಲ್ ನಲ್ಲಿ ನಡೆದ ಜಿ - 20 ಆಶ್ರಯದಲ್ಲಿ ನಡೆದ ಥಿಂಕ್ - 20 ಇದರ ಎರಡು ದಿನಗಳ ಸಭೆಯ ನಂತರ ಥಿಂಕ್ - 20 ಘೋಷಣೆಯನ್ನು ಭೋಪಾಲ್ ಬಿಡುಗಡೆ ಮಾಡಲಾಗಿದೆ. ಭಾರತ ಮತ್ತು ವಿದೇಶದಲ್ಲಿಯ ಒಟ್ಟು 300 ಕ್ಕೂ ಹೆಚ್ಚು ಬುದ್ಧಿಜೀವಿಗಳು ಈ ಘೋಷಣೆಗೆ ಸಹಿ ಹಾಕಿದ್ದಾರೆ. * ಥಿಂಕ್ - 20 ಎಂಬುದು ಜಿ - 20 ರಾಷ್ಟ್ರಗಳ ಚಿಂತನ ಚಿಲುಮೆಗಳ ಒಂದು ವೇದಿಕೆಯಾಗಿದೆ. ಇದು 2012 ರಲ್ಲಿ ರಚನೆಯಾಗಿದ್ದು, ಜಿ - 20 ದೇಶಗಳ ನಾಯಕರಿಗೆ ನೀತಿಗಳ ಕುರಿತು ಶಿಫಾರಸ್ಸು ಮಾಡುತ್ತದೆ. ಜಿ - 20 ಸಭೆಯ ಪೂರ್ವಭಾವಿಯಾಗಿ ಸಭೆ ನಡೆಸುತ್ತದೆ.