Job Description: ➤ ರಾಷ್ಟ್ರದ ಪ್ರಮುಖ ಕೈಗಾರಿಕಾ ಹಬ್‌ಗಳಲ್ಲಿ ಒಂದಾದ ಗುಜರಾತ್, ಕೈಗಾರಿಕಾ ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ನಾವೀನ್ಯತೆಗೆ (Innovation) ಹೊಸ ವೇಗ ನೀಡಲು 'ನೂತನ ಕೈಗಾರಿಕಾ ನೀತಿ-2026' (Gujarat Industrial Policy 2026) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಅವರು ಈ ನೂತನ ನೀತಿಯನ್ನು ಅನಾವರಣಗೊಳಿಸಿದರು.➤ 'ಅಲ್ಟ್ರಾ ಮೆಗಾ' (Ultra Mega) ಕೈಗಾರಿಕಾ ವಲಯದ ಪರಿಚಯ: ಈ ಹೊಸ ನೀತಿಯಲ್ಲಿ ಸರಕಾರವು ಬೃಹತ್ ಹೂಡಿಕೆದಾರರನ್ನು ಆಕರ್ಷಿಸಲು ಹೊಸದಾಗಿ 'ಅಲ್ಟ್ರಾ ಮೆಗಾ ಇಂಡಸ್ಟ್ರಿಯಲ್ ಯೂನಿಟ್' ಎಂಬ ವಿಶೇಷ ವರ್ಗವನ್ನು ಸೃಷ್ಟಿಸಿದೆ. ಹೂಡಿಕೆ ಮತ್ತು ಉದ್ಯೋಗದ ಮಿತಿ: ಕನಿಷ್ಠ ₹10,000 ಕೋಟಿಗೂ ಅಧಿಕ ಹೂಡಿಕೆ ಹಾಗೂ ಕನಿಷ್ಠ 3,000 ನೇರ ಉದ್ಯೋಗ ಸೃಷ್ಟಿಸುವ ಬೃಹತ್ ಕೈಗಾರಿಕೆಗಳು ಈ ವರ್ಗಕ್ಕೆ ಸೇರುತ್ತವೆ. ಹೆಚ್ಚುವರಿ ನಿಯಮ: ಪ್ರತಿ ಹೆಚ್ಚುವರಿ ₹5,000 ಕೋಟಿ ಹೂಡಿಕೆಗೆ ಕನಿಷ್ಠ 500 ಹೆಚ್ಚುವರಿ ಉದ್ಯೋಗ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶೇ. 40 ರಷ್ಟು ಭಾರಿ ಸಬ್ಸಿಡಿ: ಈ ವರ್ಗದ ಕೈಗಾರಿಕೆಗಳಿಗೆ ಬಂಡವಾಳ ಸಬ್ಸಿಡಿ (Capital Subsidy), ಬಡ್ಡಿ ಸಬ್ಸಿಡಿ ಮತ್ತು ವಿದ್ಯುತ್ ದರ ರಿಯಾಯಿತಿಗಳ ರೂಪದಲ್ಲಿ ಒಟ್ಟು ಹೂಡಿಕೆಯ ಶೇ. 40 ರಷ್ಟು ಪ್ರೋತ್ಸಾಹಕ ಧನ (Incentives) ಸಿಗಲಿದೆ. ➤ ಆದ್ಯತಾ ವಲಯಗಳ (Thrust Sectors) ವಿಸ್ತರಣೆ: ಗುಜರಾತ್ ಸರಕಾರವು ಈ ಹಿಂದೆ ಇದ್ದ 9 ಪ್ರಮುಖ ಆದ್ಯತಾ ಕ್ಷೇತ್ರಗಳ ಪಟ್ಟಿಯನ್ನು 16 ವಲಯಗಳಿಗೆ ವಿಸ್ತರಿಸಿದೆ. ಭವಿಷ್ಯದ ತಂತ್ರಜ್ಞಾನ ಆಧಾರಿತ ಉತ್ಪಾದನೆಗೆ ಈ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಮುಖ ಹೊಸ ಕ್ಷೇತ್ರಗಳು: ಸೆಮಿಕಂಡಕ್ಟರ್ ಪೂರಕ ಉದ್ಯಮಗಳು (Ancillary units), ಡ್ರೋನ್ ತಯಾರಿಕೆ, ರೋಬೋಟಿಕ್ಸ್, ಪರಮಾಣು ಶಕ್ತಿ ಉಪಕರಣಗಳ ತಯಾರಿಕೆ (Nuclear Power Equipment), ಮತ್ತು ಟೆಕ್ಸ್‌ಟೈಲ್ ಹಾಗೂ ಇ-ತ್ಯಾಜ್ಯ ಮರುಬಳಕೆ (Recycling) ಉದ್ಯಮಗಳು. ಇತರ ಕ್ಷೇತ್ರಗಳು: ಹಸಿರು ಇಂಧನ ಪರಿಸರ ವ್ಯವಸ್ಥೆ (Green Energy), ಮೊಬಿಲಿಟಿ (ವಾಹನ ವಲಯ), ಕ್ರಿಟಿಕಲ್ ಮಿನರಲ್ ಪ್ರೊಸೆಸಿಂಗ್, ಮತ್ತು ಹೆಲ್ತ್‌ಕೇರ್. ➤ ಪ್ರಾಜೆಕ್ಟ್ ಡ್ರೈವ್ (Project THRIVE): ನಗರೀಕರಣದ ಒತ್ತಡ ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಈ ಕೈಗಾರಿಕಾ ನೀತಿಯಲ್ಲಿ ಅತ್ಯಂತ ನಾವೀನ್ಯತಾ ಯೋಜನೆಯೊಂದನ್ನು ತರಲಾಗಿದೆ. ಅದರ ಹೆಸರೇ Project THRIVE (Transition for Harmonized Relocation and Inclusive Vibrant Economy).ಯೋಜನೆಯ ಉದ್ದೇಶ: ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ (ನಗರ ಪ್ರದೇಶಗಳಲ್ಲಿ) ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳನ್ನು ನಗರದ ಹೊರವಲಯಕ್ಕೆ ಯಶಸ್ವಿಯಾಗಿ ಸ್ಥಳಾಂತರಿಸುವುದು.➤ ಪ್ರಾಜೆಕ್ಟ್ ಡ್ರೈವ್‌ನ ಪ್ರಮುಖ ಪ್ರಯೋಜನಗಳು: ಖಾಸಗಿ ಕೈಗಾರಿಕಾ ಎಸ್ಟೇಟ್: ನಗರ ಪ್ರದೇಶದ ಕನಿಷ್ಠ 10 ಉದ್ಯಮಗಳು ಒಟ್ಟಾಗಿ ನಗರದ ಹೊರವಲಯದಲ್ಲಿ ಖಾಸಗಿ ಕೈಗಾರಿಕಾ ಎಸ್ಟೇಟ್ ಸ್ಥಾಪಿಸಬಹುದು ಅಥವಾ ಸ್ವತಂತ್ರವಾಗಿಯೂ ಸ್ಥಳಾಂತರಗೊಳ್ಳಬಹುದು. 'ಹೊಸ ಘಟಕ' ಸ್ಥಾನಮಾನ: ಸ್ಥಳಾಂತರಗೊಳ್ಳುವ ಉದ್ಯಮಗಳನ್ನು 'ಹೊಸ ಘಟಕಗಳು' (New Units) ಎಂದು ಪರಿಗಣಿಸಿ, ಸರಕಾರದ ಎಲ್ಲಾ ಹೊಸ ಸಬ್ಸಿಡಿ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ. ವೇತನ ಪ್ರೋತ್ಸಾಹಕ (Wage Support): ಸ್ಥಳಾಂತರಗೊಂಡ ನಂತರದ ಮೊದಲ 6 ತಿಂಗಳವರೆಗೆ ಪ್ರತಿ ಉದ್ಯೋಗಿಗೆ ತಿಂಗಳಿಗೆ ₹5,000 ರಂತೆ ವೇತನ ಸಹಾಯಧನವನ್ನು ಸರಕಾರ ನೀಡಲಿದೆ. ಪರಿಸರ ಮಂಜೂರಾತಿ ಸರಳೀಕರಣ: GIDC (ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮ) ಈ ಎಸ್ಟೇಟ್‌ಗಳಿಗೆ ಒಟ್ಟಾರೆ ಪರಿಸರ ಮಂಜೂರಾತಿಯನ್ನು (Blanket Environmental Clearance) ಪಡೆಯುವುದರಿಂದ, ವೈಯಕ್ತಿಕ ಉದ್ಯಮಗಳು ಪ್ರತ್ಯೇಕವಾಗಿ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಅಂತರರಾಷ್ಟ್ರೀಯ ಮಾದರಿ: ಚೀನಾದ ಬೀಜಿಂಗ್, ಗುವಾಂಗ್‌ಡಾಂಗ್ ಮತ್ತು ವಿಯೆಟ್ನಾಂನ ಹೋ ಚಿ ಮಿನ್ ಸಿಟಿಗಳ ಯಶಸ್ವಿ ಕೈಗಾರಿಕಾ ಸ್ಥಳಾಂತರ ಮಾದರಿಗಳನ್ನು ಆಧರಿಸಿ ಈ ಯೋಜನೆಯನ್ನು ರೂಪಿಸಲಾಗಿದೆ.