* ಅಪರೂಪದ ಬಿಳಿ ತಿಮಿಂಗಿಲವೊಂದು ಇತ್ತೀಚೆಗೆ ಥೈಲ್ಯಾಂಡ್ ನ ಫುಕೆಟ್ (Phuket) ಪ್ರಾಂತ್ಯದಲ್ಲಿ ಕಂಡು ಬಂದಿದೆ. 2015 ರಲ್ಲಿ ಮೊದಲ ಬಾರಿಗೆ ಜೀವಂತ 'ಒಮುರಾ ಬಿಳಿ' ತಿಮಿಂಗಿಲ ಪತ್ತೆಯಾಗಿತ್ತು* ಒಮುರಾ ತಿಮಿಂಗಿಲಗಳು ಸಾಮಾನ್ಯವಾಗಿ ಆಗ್ನೇಯ ಏಷ್ಯಾದ ಸಮುದ್ರಗಳು ಮತ್ತು ಜಪಾನ್‌ನ ದಕ್ಷಿಣದ ನೀರಿನಲ್ಲಿ ವಾಸಿಸುವ ಅಪರೂಪದ ಪ್ರಭೇದವೆಂದು ವರ್ಗೀಕರಿಸಲಾಗಿದೆ. ಸಾಂದರ್ಭಿಕವಾಗಿ ಅಂಡಮಾನ್ ಸಮುದ್ರ ಮತ್ತು ಥೈಲ್ಯಾಂಡ್ ಕೊಲ್ಲಿಯಲ್ಲಿ ಕಂಡುಬರುತ್ತದೆ.* ಸಮುದ್ರ ಮತ್ತು ಕರಾವಳಿ ಸಂಪನ್ಮೂಲಗಳ ಇಲಾಖೆಯ ಹೊಸದಾಗಿ ನೇಮಕಗೊಂಡ ಮುಖ್ಯಸ್ಥ ಪಿನ್ಸಾಕ್ ಸುರಸವಾಡಿ, ಇಲಾಖೆಯ ಪ್ರಾಣಿ ತಜ್ಞರ ತಂಡವು ಅಲ್ಬಿನೋ ಒಮುರಾ ತಿಮಿಂಗಿಲವನ್ನು ಗುರುತಿಸಿದ ಪ್ರದೇಶವನ್ನು ಶೋಧಿಸಿದೆ ಆದರೆ ಇನ್ನೂ ಪತ್ತೆಯಾಗಿಲ್ಲ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ.