* ಖ್ಯಾತ ಉರ್ದು ಕವಿ 71 ವರ್ಷ ವಯಸ್ಸಿನ ಮುನವ್ವರ್ ರಾಣಾ ಅವರು ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಣಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.* 2014ರಲ್ಲಿ ಇವರ 'ಶಹದಾಬಾ' ಉರ್ದು ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 2012ರಲ್ಲಿ ಶಹೀದ್ ಶೋಧ್ ಸಂಸ್ಥಾನದಿಂದ ಮಾತಿ ರತನ್ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.* ಸಾಹಿತ್ಯ ಕ್ಷೇತ್ರದ ಇವರ ಸಾಧನೆಗಾಗಿ 'ಅಮೀರ್ ಖುಸ್ರೋ ಪ್ರಶಸ್ತಿ' 'ಮಿರ್ ತಾಕಿ ಮಿರ್ ಪ್ರಶಸ್ತಿ' 'ಗಾಲಿಬ್ ಪ್ರಶಸ್ತಿ' 'ಜಾಕಿರ್ ಹುಸೇನ್ ಪ್ರಶಸ್ತಿ' ಹಾಗೂ 'ಸರಸ್ವತಿ ಸಮಾಜ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು. * 1952 ನವೆಂಬರ್ 26ರಂದು ರಾಯ್ ಬರೇಲಿಯಲ್ಲಿ ಜನಿಸಿದ ರಾಣಾ ಅವರು ಉರ್ದು ಮಾತ್ರವಲ್ಲದೆ ಹಿಂದಿ ಹಾಗೂ ಅವರಿ ಭಾಷೆಗಳನ್ನು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.