* ಪ್ರಸ್ತುತ ಸರಕಾರಿ ಬ್ಯಾಂಕ್ ನೌಕರರ ಕೆಲಸದ ಅವಧಿಯನ್ನು ವಾರಕ್ಕೆ 5 ದಿನ ಕೆಲಸ ಮತ್ತು 2 ದಿನ ರಜೆ ಪದ್ದತಿಯನ್ನು ಜಾರಿಗೆ ತರಬೇಕು ಎನ್ನುವ ಬ್ಯಾಂಕ್ ನೌಕರರ ಬೇಡಿಕೆಯನ್ನು ಕೇಂದ್ರ ಸರಕಾರ ಪರಿಗಣಿಸಿದ್ದು, ಹೊಸ ಪದ್ದತಿಯ ಜಾರಿಗೆಯನ್ನು ಹಣಕಾಸು ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.* ಹೊಸ ವ್ಯವಸ್ಥೆಯಲ್ಲಿ ಬ್ಯಾಂಕ್ ನೌಕರರ ದಿನದ ಕೆಲಸದ ಅವಧಿಯನ್ನು 40 ನಿಮಿಷ ಹೆಚ್ಚಳವಾಗಲಿದ್ದು, ಈ ಪದ್ದತಿಯಲ್ಲಿ ಬ್ಯಾಂಕ್ ನೌಕರರು ಬೆಳಗ್ಗೆ 9:45 ರಿಂದ ಸಂಜೆ 5:30 ರವರೆಗೆ ಕೆಲಸ ಮಾಡಬೇಕಾಗುತ್ತದೆ.