Job Description: * ಸ್ಪೇನ್ ಸರ್ಕಾರ ಇತ್ತೀಚೆಗೆ ಋತುಚಕ್ರ ವೇತನಸಹಿತ ರಜೆ ಕಾನೂನನ್ನು ಅಂಗೀಕರಿಸಿದೆ. ಇದು ಈ ರೀತಿ ಮಾಡಿದ ಯುರೋಪ್ ನ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. * ಈ ಕಾನೂನಿನನ್ವಯ, ದೇಶದ ಮಹಿಳೆಯರು ಋತುಚಕ್ರದ ಅವಧಿಯಲ್ಲಿ ವೇತನ ಸಹಿತ ರಜೆಯನ್ನು ಪಡೆಯಬಹುದಾಗಿದೆ. ರಾಷ್ಟ್ರಮಟ್ಟದಲ್ಲಿ ಋತುಚಕ್ರ ಅವಧಿ ರಜೆ ಸೌಲಭ್ಯದ ಕಾನೂನು ರೂಪುಗೊಂಡಿಲ್ಲವಾದರೂ ಭಾರತದಲ್ಲಿ ಬೈಜುಸ್, ಝೂಮಾಟೊ, ಎಆರ್‌ಸಿ, ಮ್ಯಾಗ್‌ಝಿಟರ್, ಗೊಝಪ್ ಮುಂತಾದ ಕೆಲವು ಖಾಸಗಿ ಕಂಪನಿಗಳು ಋತುಚಕ್ರ ರಜೆಯನ್ನು ನೀಡುತ್ತಿವೆ.* ಋತುಚಕ್ರ ಅವಧಿಯಲ್ಲಿ ರಜೆ ನೀಡುವ ಕಾನೂನು ಕೆಲವು ದೇಶಗಳಲ್ಲಿ ಮಾತ್ರವೇ ಇವೆ. ಜಾಂಬಿಯಾ, ಇಂಡೋನೇಷ್ಯಾ ಮತ್ತು ಜಪಾನ್ ದೇಶಗಳಲ್ಲೂ ಇದೆ. ಭಾರತದಲ್ಲಿ ಕೇರಳ ರಾಜ್ಯ ಮಾತ್ರವೇ ಮಹಿಳಾ ಉದ್ಯೋಗಿಗಳಿಗೆ ಈ ರಜಾ ಸೌಲಭ್ಯ ಕಲ್ಪಿಸಿದೆ.