Job Description: * ಶುಕ್ರವಾರ ಮಾರ್ಚ್ 3 ರಂದು ಗುವಾಹಟಿಯಲ್ಲಿ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಅಡಿಯಲ್ಲಿ ಪ್ರಥಮ ಸಾಂಪ್ರದಾಯಿಕ ಔಷಧದ ʻಬಿ2ಬಿʼ ಜಾಗತಿಕ ಸಮ್ಮೇಳನ ಮತ್ತು ಪ್ರದರ್ಶನ ಮೇಳವನ್ನು ಕೇಂದ್ರ ಆಯುಷ್ ಹಾಗೂ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ರವರು ಉದ್ಘಾಟಿಸಿದರು.* "ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಸೋವಾ-ರಿಗ್ಪಾ ಮತ್ತು ಹೋಮಿಯೋಪತಿ (ಆಯುಷ್) ಶಿಕ್ಷಣ ಮತ್ತು ಅಭ್ಯಾಸಗಳ ಗುಣಮಟ್ಟದ ಭರವಸೆಗೆ ಭಾರತ ಸಾಕಷ್ಟು ಒತ್ತು ನೀಡುತ್ತದೆ." ಎಂದು ಕೇಂದ್ರ ಆಯುಷ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಹಾಯಕ ಸಚಿವ ಡಾ.ಮಹೇಂದ್ರಭಾಯಿ ಮುಂಜಪಾರಾ ಅವರು ಹೇಳಿದರು.* 13 ದೇಶಗಳ ಒಟ್ಟು 75 ವಿದೇಶಿ ಅಧಿಕಾರಿಗಳು ಮತ್ತು ವ್ಯಾಪಾರ ಪ್ರತಿನಿಧಿಗಳು ಭೌತಿಕ ವಿಧಾನದಲ್ಲಿ ಭಾಗವಹಿಸುತ್ತಿದ್ದಾರೆ. ಚೀನಾ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನದ ಅಧಿಕೃತ ಪ್ರತಿನಿಧಿಗಳು ವರ್ಚುವಲ್ ಮೂಲಕ ಪಾಲ್ಗೊಳ್ಳುತ್ತಿದ್ದಾರೆ.