Job Description: * ಭಾರತೀಯ ರಿಸರ್ವ್ ಬ್ಯಾಂಕ್ ವು ಮತ್ತೆ ರೆಪೊದರವನ್ನು ಫೆ. 08 ರಂದು 0.25 ರಷ್ಟು ಹೆಚ್ಚಿಸಿದೆ ಈಗ ಒಟ್ಟು ರೆಪೊದರವು 6.50 ತಲುಪಿದೆ. ಹಣದುಬ್ಬರ ಹೆಚ್ಚಿರುವ ಕಾರಣದಿಂದಾಗಿ ಮುಂದೆ ಇನ್ನು ರೆಪೊದರವನ್ನು ಅಧಿಕಗೊಳಿಸಬಹುದು ಎಂದು ಹೇಳಲಾಗಿದೆ.* ರೆಪೊದರ ಹೆಚ್ಚಳದ ಪರಿಣಾಮದಿಂದಾಗಿ ಗೃಹ ಸಾಲ, ವಾಹನ ಸಾಲ, ವಯಕ್ತಿಕ ಸಾಲ, ಕಾರ್ಪೊರೇಟ್ ಸಾಲದ ಮೇಲಿನ ಬಡ್ಡಿದರವು ಹೆಚ್ಚಾಗಲಿದೆ. * ಪ್ರಸ್ತುತ ಹಣದುಬ್ಬರವು 6.5 ರಷ್ಟಿದೆ. ಆಹಾರ ಮತ್ತು ಇಂಧನ ಹೊರತು ಪಡಿಸಿದ ಬೇರೆ ಸೇವೆಗಳು 6.1% ರಷ್ಟಿದೆ. ಮುಂದಿನ ಹಣಕಾಸು ವರ್ಷದಲ್ಲಿ ಹಣದುಬ್ಬರದ ಪ್ರಮಾಣವು 5.3% ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ.