* ರೈಲ್ವೆಯ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇ 15ರಷ್ಟು ಒಟ್ಟು ಮೀಸಲಾತಿ, ವಯೋಮಿತಿಯಲ್ಲಿ ಸಡಿಲಿಕೆ ಹಾಗೂ ದೈಹಿಕ ಪರೀಕ್ಷೆಯಿಂದ ವಿನಾಯಿತಿ ನೀಡಲಿದೆ ಎಂದು ತಿಳಿಸಿದೆ.* ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ರೈಲ್ವೆ ಮಂಡಳಿ ಪತ್ರ ಬರೆದಿದೆ.* ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ವಯೋಮಿತಿಯಲ್ಲಿ ಐದು ವರ್ಷ ಹಾಗೂ ನಂತರದ ಬ್ಯಾಚ್‌ಗಳು ಅಗ್ನಿವೀರರಿಗೆ ಮೂರು ವರ್ಷಗಳಷ್ಟು ಸಡಿಲಿಕೆ ನೀಡಲಾಗುವುದು. ರೈಲ್ವೆಯ ವಿವಿಧ ವಿಭಾಗಗಳಲ್ಲಿನ ಹಂತ-1 ಹಾಗೂ ಹಂತ-2 ಹಾಗೂ ಅದಕ್ಕೂ ಮೇಲ್ಪಟ್ಟ ಹುದ್ದೆಗಳಿಗೆ ಈ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.