* ಆಧುನಿಕ ಶುಶ್ರೂಷೆಯ ಸಂಸ್ಥಾಪಕ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು 1965 ರಲ್ಲಿ, ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸಸ್ ಮೇ 12 ಅಂತರಾಷ್ಟ್ರೀಯ ದಾದಿಯರ ದಿನವಾಗಿ ಆಚರಿಸಲು ಪ್ರಾರಂಭಿಸಿತು * ಅಂತರಾಷ್ಟ್ರೀಯ ದಾದಿಯರ ದಿನ 2023ರ ಥೀಮ್, “ನಮ್ಮ ದಾದಿಯರು. ನಮ್ಮ ಭವಿಷ್ಯ“, ಎಂಬ ಧ್ಯೇಯ ವಾಕ್ಯದಡಿ ಅಂತರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಯಿತು. * ಅಂತರರಾಷ್ಟ್ರೀಯ ದಾದಿಯರ ದಿನವು ಪ್ರಪಂಚದಾದ್ಯಂತದ ದಾದಿಯರ ಅಮೂಲ್ಯ ಕೊಡುಗೆಗಳನ್ನು ಗೌರವಿಸುವ ಮತ್ತು ಗುರುತಿಸುವ ಪ್ರಮುಖ ದಿನವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ರೋಗಿಗಳ ಯೋಗಕ್ಷೇಮ, ಸುರಕ್ಷತೆ ಮತ್ತು ಚೇತರಿಕೆಗೆ ಜವಾಬ್ದಾರರಾಗಿರುತ್ತಾರೆ.