* ಹೆರಿಗೆ ಸಮಯದಲ್ಲಿ ತಾಯಿ ಮತ್ತು ಕೂಸು ಹಾಗೂ ಎಳೆ ಮಕ್ಕಳ ಸಾವಿನಲ್ಲಿ ಭಾರತಕ್ಕೆ ನಂ.1 ಸ್ಥಾನದಲ್ಲಿದೆ. ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ ಶೇ.60 ರಷ್ಟು ಪ್ರಕರಣಗಳು ವರದಿಯಾಗುತ್ತಿವೆ. *  ಅಂತಾರಾಷ್ಟ್ರೀಯ ಮಹಿಳಾ ಮತ್ತು ನವಜಾತ ಶಿಶುಗಳ ಆರೋಗ್ಯ ಸಮ್ಮೇಳನದಲ್ಲಿ ಈ ವರದಿ ಬಿಡುಗಡೆಯಾಗಿದೆ.* ಭಾರತದ ನಂತರದ ಸ್ಥಾನದಲ್ಲಿ ಕ್ರಮೇಣವಾಗಿ ನೈಜೇರಿಯ, ಪಾಕಿಸ್ತಾನ, ಕಂಗೊ, ಇಥಿಯೋಪಿಯ, ಬಾಂಗ್ಲಾದೇಶ ಮತ್ತು ಚೀನಾ ದೇಶಗಳಿವೆ.* ಈ ವರದಿಯು ಅತ್ಯಂತ ಕಡು ಬಡವರಿಗೆ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಈ ವರದಿಯು ಅಭಿಪ್ರಾಯಪಟ್ಟಿದೆ.