*  ಭಾರತದ ರಿಧಮ್ ಸಂಗ್ವಾನ್ ಅವರು ISSF ವಿಶ್ವಕಪ್ (ಪಿಸ್ತೂಲ್ ಮತ್ತು ರೈಫಲ್)  ಶೂಟಿಂಗ್ ಟೋರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.* ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ  ISSF ವಿಶ್ವಕಪ್ (ಪಿಸ್ತೂಲ್ ಮತ್ತು ರೈಫಲ್)  ಶೂಟಿಂಗ್ ಟೋರ್ನಿಯಲ್ಲಿ ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ  ಭಾರತದ ರಿಧಮ್ ಸಂಗ್ವಾನ್ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. * ಫೈನಲ್‌ನಲ್ಲಿ ರಿಧಮ್ 219.1 ಪಾಯಿಂಟ್ಸ್ ಗಳಿಸಿದರು. ಗ್ರೀಸ್‌ನ ಅನ್ನಾ ಕೊರಾಕಾಕಿ (2413 ಪಾಯಿಂಟ್ಸ್) ಚಿನ್ನ ಮತ್ತು ಉಕ್ರೇನ್‌ನ ಒಲೆನಾ ಕೊಸೈವಿಚ್ (240.6) ಬೆಳ್ಳಿ ಜಯಿಸಿದರು.* 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗಗಳಲ್ಲಿ ಫೈನಲ್ಸ್ ತಲುಪಿದ್ದ ಸರಭೋತ್ ಸಿಂಗ್ ಮತ್ತು ಇಶಾ ಸಿಂಗ್‌ ಪದಕ ತಪ್ಪಿಸಿಕೊಂಡರು.* ಇಶಾ ಆರನೇ ಸ್ಥಾನ ಗಳಿಸಿದರೆ, ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ದಿವ್ಯಾ ಟಿ.ಎಸ್. ಅವರು17ನೇ ಸ್ಥಾನ ಗಳಿಸಿದರು.