Job Description: * 21ನೇ ಶತಮಾನದಲ್ಲಿ ಭಾರತಕ್ಕೆ ಹೊಸ ದಿಕ್ಸೂಚಿ ಆಗಲಿದೆ. ಈ ದಶಮಾನದ ಅಂತ್ಯಕ್ಕೆ ಶೇಕಡ 50ರಷ್ಟು ಪಳಯುಳಿಕೇತರ ಇಂಧನ ಸಾಮರ್ಥ್ಯದ ಗುರಿ ಹೊಂದಲಾಗಿದೆ. ಬಜೆಟ್ ನಲ್ಲಿ ಇಂಧನ ಪರಿವರ್ತನೆ, ನೆಟ್ ಜೀರೋ ಗುರಿ, ಹಸಿರು ತಂತ್ರಜ್ಞಾನಗಳು, ಇಂಧನ ದಕ್ಷತೆ, ಮತ್ತಿತರ ಉದ್ದೇಶಗಳಿಗಾಗಿ 35000 ಕೋಟಿ ರೂ ಮೂಲ ಬಂಡವಾಳ ಹೂಡಿಕೆಗೆ ಅನುದಾನ ಮೀಸಲಿಡಲಾಗಿದೆ.* ದೇಶದ ವಿವಿಧ ಹದಿನೈದು ನಗರಗಳಲ್ಲಿ 67 ಪೆಟ್ರೋಲ್ ಬಂಕ್ ಗಳಲ್ಲಿ ಶೇಕಡ 20ರಷ್ಟು ಎಥನಾಲ್ ಮಿಶ್ರಿತ "ಇ -20" ಹೆಸರಿನ ಪೆಟ್ರೋಲ್ ಅನ್ನು ಪ್ರಾಯೋಗಿಕವಾಗಿ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ.* 2025 ರಿಂದ ಪೆಟ್ರೋಲ್ ನೊಂದಿಗೆ ಶೇಕಡ 20ರಷ್ಟು ಎಥನಾಲ್ ಮಿಶ್ರಣ ಮಾಡಿ ಮಾರಾಟ ಮಾಡಲು ಅವಕಾಶ ಮಾಡಲಾಗುತ್ತದೆ. ಎಥನಾಲ್ ಸಕ್ಕರೆ ಮತ್ತು ಬೆಲ್ಲ ಉತ್ಪಾದನೆ ವೇಳೆ ಕಬ್ಬಿನಿಂದ ಸಿಗುವ ಉಪ ಉತ್ಪನ್ನ. ಇದರ ಬಳಕೆಯಿಂದ ಹೆಚ್ಚಿನ ಬೇಡಿಕೆ ಲಭ್ಯವಾಗಿ ರೈತರಿಗೆ ಆದಾಯದ ಮತ್ತೊಂದು ಮೂಲವಾಗಲಿದೆ.