Job Description: * ಭೂಕಂಪ, ಭೂಕುಸಿತದ ಕುರಿತು ಮುನ್ಸೂಚನೆ ನೀಡಲು ವಿಜ್ಞಾನಿಗಳಿಗೆ ಪ್ರಯೋಜನಕಾರಿಯಾಗುವ ಮೂರು ವರ್ಷಗಳ ಕಾಲ ಪ್ರತಿ 12 ದಿನಗಳಿಗೊಮ್ಮೆ ಇಡೀ ಭೂಮಂಡಲದ ಚಿತ್ರ ಸೆರೆ ಹಿಡಿಯುವ, ಕಂಡು ಕೇಳರಿಯದ ರೀತಿಯಲ್ಲಿ ಭೂಮಿಯ ಸಣ್ಣ ಸಣ್ಣ ಬದಲಾವಣೆಗಳನ್ನು ಪತ್ತೆ ಹಚ್ಚುವ ಈ ಉಪಗ್ರಹವನ್ನು ನಾಸಾ ಮತ್ತು ಇಸ್ರೋದ ವಿಜ್ಞಾನಿಗಳು ತಯಾರಿಸುತ್ತಿದ್ದಾರೆ. * ಕಳೆದ ಎಂಟು ವರ್ಷಗಳಿಂದ ಇದರ ತಯಾರಿ ನಡೆಯುತ್ತಿದೆ. ಈ ಉಪಗ್ರಹ 12 ಮೀಟರ್ ಅಗಲದ ಆಂಟೆನ್ ಹೊಂದಿದೆ. 2024 ರ ಜನವರಿಯಲ್ಲಿ ಜಿಎಸ್‌ಎಲ್‌ವಿ ರಾಕೆಟ್ ಬಳಸಿ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಇದನ್ನು ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ನಿಸಾರ್ ಉಪಗ್ರಹವು ಹಗಲು ರಾತ್ರಿ ಎನ್ನದೆ ದಟ್ಟ ಮೋಡಗಳು ಇದ್ದರೂ ಚಿತ್ರ ಸೆರೆಯುಡಿತ್ತದೆ.