* ಭಾರತ ಸರ್ಕಾರವು ಔಷಧ ಕ್ಷೇತ್ರದಲ್ಲಿ ವ್ಯವಹಾರ ಸುಗಮಗೊಳಿಸುವುದು (Ease of Doing Business) ಮತ್ತು ಪಾರದರ್ಶಕ ಆಡಳಿತವನ್ನು ಸ್ಥಾಪಿಸುವ ಗುರಿಯಿಂದ “ರಾಷ್ಟ್ರೀಯ ಆನ್‌ಲೈನ್ ಔಷಧ ಪರವಾನಗಿ ವ್ಯವಸ್ಥೆ (National Online Drug Licensing System)” ಅನ್ನು ದೇಶವ್ಯಾಪಿ ಪ್ರಾರಂಭಿಸಿದೆ. ಈ ವ್ಯವಸ್ಥೆಯಿಂದ ಭಾರತದಲ್ಲಿ ಔಷಧ ಸಂಬಂಧಿತ ಎಲ್ಲಾ ಪರವಾನಗಿಗಳನ್ನು ಒಂದೇ ರಾಷ್ಟ್ರ ಮಟ್ಟದ ಡಿಜಿಟಲ್ ವೇದಿಕೆಯ ಮೂಲಕ ನೀಡಲಾಗುತ್ತದೆ.* ಈ ಮೂಲಕ ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕ ಪರವಾನಗಿ ಪ್ರಕ್ರಿಯೆಯ ಅವಲಂಬನೆ ಕಡಿಮೆಯಾಗುತ್ತಿದ್ದು, ಔಷಧ ತಯಾರಿಕೆ, ಮಾರಾಟ ಮತ್ತು ವಿತರಣೆ ಪ್ರಕ್ರಿಯೆ ಹೆಚ್ಚು ವೇಗ ಹಾಗೂ ಪಾರದರ್ಶಕವಾಗಲಿದೆ.🔥 ಮುಖ್ಯ ಉದ್ದೇಶಗಳು:* ಒಂದೇ ರಾಷ್ಟ್ರ ಮಟ್ಟದ ಆನ್‌ಲೈನ್ ವೇದಿಕೆ ಮೂಲಕ ಪರವಾನಗಿಗಳನ್ನು ಜಾರಿ ಮತ್ತು ನವೀಕರಣ.*ಅನಗತ್ಯ ತಡವಾದ ಪ್ರಕ್ರಿಯೆಗಳಿಗೆ ವಿರಾಮ ನೀಡಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು.* ಕೇಂದ್ರ (CDSCO) ಮತ್ತು ರಾಜ್ಯ ಔಷಧ ನಿಯಂತ್ರಣ ಇಲಾಖೆಗಳ ಸಮನ್ವಯ ಸಾಮರ್ಥ್ಯ ಹೆಚ್ಚಿಸುವುದು.* ಪರವಾನಗಿ ಕಾರ್ಯಪಡೆಯನ್ನು ಸಂಪೂರ್ಣ ಕಾಗದರಹಿತ (Paperless) ವ್ಯವಸ್ಥೆಯ ಮೂಲಕ ನಡೆಸುವುದು.* ಸಿಂಗಲ್ ವಿಂಡೋ ಸಿಸ್ಟಮ್:ತಯಾರಿ, ಮಾರಾಟ, ವಿತರಣೆ, ಲೈಸೆನ್ಸ್ ನವೀಕರಣ, ಅನುಮತಿ, ನೋಂದಣಿ– ಎಲ್ಲ ಸೇವೆಗಳು ಒಂದೇ ಪೋರ್ಟಲ್‌ನಲ್ಲಿ ಲಭ್ಯ* ಎಲ್ಲಾ ಹಿತಾಸಕ್ತಿಗಳಿಗೆ ಸಾಮಾನ್ಯ ಪೋರ್ಟಲ್: ಔಷಧ ಕಂಪನಿಗಳು, ತಯಾರಕರು, ಮಾರುಕಟ್ಟೆ ವಿತರಕರು, ಔಷಧ ಮಳಿಗೆಗಳ ಮಾಲೀಕರು/ಫಾರ್ಮಸಿಗಳು ಎಲ್ಲರೂ ಒಂದೇ ವೇದಿಕೆ ಬಳಸಿ ಪರವಾನಗಿ ಪಡೆಯಬಹುದು.* ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು ಹಾಗೂ ಅಪ್‌ಡೇಟ್‌ಗಳನ್ನು SMS/Email ಮೂಲಕ ಪಡೆಯುತ್ತಾರೆ.🌐 ಡಿಜಿಟಲ್ ಇಂಡಿಯಾ & ಇ-ಗವರ್ಣೆನ್ಸ್‌ಗೆ ದೊಡ್ಡ ಹೆಜ್ಜೆ* ಈ ಯೋಜನೆ ಡಿಜಿಟಲ್ ಇಂಡಿಯಾ ಅಭಿಯಾನದ ಪ್ರಮುಖ ಮಿಷನ್ ಗಳಾದe-Governance ,Paperless Administration ,Transparent Public Service Delivery ,ಇವುಗಳನ್ನು ವಾಸ್ತವಕ್ಕೆ ತಂದಿದೆ.ಈ ವ್ಯವಸ್ಥೆಯಿಂದ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲ, ಖಾಸಗಿ ಔಷಧ ಉದ್ಯಮದಲ್ಲೂ ಸಮಗ್ರ ಡಿಜಿಟಲೀಕರಣ ಜಾರಿಯಾಗುತ್ತದೆ.- ಈ ಹೊಸ ವ್ಯವಸ್ಥೆ Digital India ಗುರಿಗಳನ್ನು ಇನ್ನಷ್ಟು ಬಲಪಡಿಸುವ ಜೊತೆಗೆ, ಔಷಧ ಕ್ಷೇತ್ರದಲ್ಲಿ ಇ-ಗವರ್ಣೆನ್ಸ್ ಪ್ರಕ್ರಿಯೆಯನ್ನು ಬಲಪಡಿಸುತ್ತದೆ.