Job Description: * ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜಸ್ಥಾನದಲ್ಲಿ ಮಾರ್ಚ್‌ 8ರಂದು ರಾಜಸ್ಥಾನದಲ್ಲಿ ಮಹಿಳೆಯರು ಹಾಗೂ ಯುವತಿಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.* ಸಾಮಾನ್ಯ ಹಾಗೂ ಫಾಸ್ಟ್ ಬಸ್ ಸೇರಿದಂತೆ ರಾಜಸ್ಥಾನದ ಸಾರಿಗೆ ನಿಗಮಕ್ಕೆ ಸೇರಿದ ಎಲ್ಲಾ ಬಸ್‌ಗಳಲ್ಲೂ ಈ ಸೌಲಭ್ಯ ಇರಲಿದ್ದು, ಮಾರ್ಚ್ 8ರಂದು ಸುಮಾರು 8.50 ಲಕ್ಷ ಮಹಿಳೆಯರು ಪ್ರಯಾಣಿಸುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರದ ಅಧಿಕೃತ ಹೇಳಿಕೆ ಪ್ರಕಾರ, ಬೊಕ್ಕಸಕ್ಕೆ ಸುಮಾರು 77.50 ಕೋಟಿ ಹೊರೆಯಾಗಲಿದೆ.* ಸಾರಿಗೆ ನಿಗಮದ ಸಾಮಾನ್ಯ ಬಸ್‌ಗಳಲ್ಲಿನ ಪ್ರಯಾಣ ದರದಲ್ಲಿ ಮಹಿಳೆಯರಿಗೆ ರಿಯಾಯಿತಿಯನ್ನು ಶೇಕಡ 50ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಅಶೋಕ ಗೆಹಲೋತ್ ಅನುಮೋದಿಸಿದ್ದಾರೆ.