Job Description: * ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿಯು (ಸಿಸಿಎಸ್) ಬುಧವಾರ ಮಾರ್ಚ್ 1 ರಂದು ಎಚ್‌ಎಎಲ್ ನಿರ್ಮಿತ 70 ತರಬೇತಿ ವಿಮಾನಗಳನ್ನು ವಾಯುಪಡೆಗಾಗಿ 76,828 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಿದೆ.* 'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸುವ ಈ ವಿಮಾನಗಳು ಕಡಿಮೆ ವೇಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಹೀಗಾಗಿ, ಇವುಗಳನ್ನು ಬಳಸಿ ಪರಿಣಾಮಕಾರಿ ತರಬೇತಿ ನೀಡಲು ಸಾಧ್ಯ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.