Job Description: * ನಿವೃತ್ತ ನ್ಯಾಯಾಧೀಶರಾದ ಬೆಳಗಾವಿಯ ಕವಿ ಡಾ. ಜೀನದತ್ತ ದೇಸಾಯಿ ಹಾಗೂ ಡಾ. ರಾಜೇಂದ್ರ ಚೆನ್ನಿ ರವರಿಗೆ ಈ ವರ್ಷದ ಅಂಬಿಕಾತನಯದತ್ತ ಪ್ರಶಸ್ತಿ ದೊರೆಕಿದೆ.* ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಜ.31 ರಂದು ವರಕವಿ ಡಾ.ದ.ರಾ.ಬೇಂದ್ರೆ ಅವರ 127 ನೇ ಹುಟ್ಟು ಹಬ್ಬದ ನಿಮಿತ್ಯ ಪ್ರತಿವರ್ಷದಂತೆ ಕನ್ನಡ ಸಾಹಿತ್ಯ ಕ್ಷೇತ್ರದ ಇಬ್ಬರು ದಿಗ್ಗಜರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.* ಈ ಪ್ರಶಸ್ತಿಯು 1 ಲಕ್ಷ ಮೌಲ್ಯವನ್ನು ಹೊಂದಿದ್ದು, ಜನೆವರಿ.31 ರಂದು ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.