Job Description: * ಬಾಗಲಕೋಟೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ಬಿಳಗಿ ತಾಲೂಕಿನಲ್ಲಿ ಫೆಬ್ರುವರಿಯಲ್ಲಿ ನಡೆಯಲಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗದಗ - ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಸ್ವಾಮೀಜಿಯವರು ಆಯ್ಕೆಯಾಗಿದ್ದಾರೆ. * ಸಿದ್ದರಾಮ ಸ್ವಾಮೀಜಿಯವರು ಮೂಲತಃ ಬಿಳಗಿ ತಾಲೂಕಿನ ಕಲ್ಮಠದವರಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ವಿಶೇಷ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾರಸತ್ವ ಲೋಕಕ್ಕೆ ಇವರ ಕೊಡುಗೆಗಳು - 'ಅನುಭಾವದಡಿಗೆ', 'ಅಮೃತಾನುಭವ', 'ಭಾರತೀಯ ತತ್ವಶಾಸ್ತ್ರ', 'ವಚನಾರ್ಥ ಚಿಂತನ', 'ಧರ್ಮಾಮೃತ', 'ಭಕ್ತಿದರ್ಶನ' ಹಾಗೂ ಇಸ್ಲಾಂ ಧರ್ಮ ಸಂದೇಶದಂತಹ ಹಲವಾರು ಕೃತಿಗಳನ್ನು ರಚಿಸಿದ್ದಾರೆ.