* ಪ್ರಸಕ್ತ ವರ್ಷದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ ನಡುವೆ 21ನೇ ರಾಷ್ಟ್ರೀಯ ಜಾನುವಾರು ಗಣತಿ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಫೆಬ್ರುವರಿ 08 ರಂದು ತಿಳಿಸಿದೆ. ಕೇಂದ್ರ ಪಶುಪಾಲನಾ ಮತ್ತು ಹೈನುಗಾರಿಕೆ ಸಚಿವಾಲಯವು ಈ ಗಣತಿ ನಡೆಸಲಿದೆ.* "21 ನೇ ಜಾನುವಾರು ಗಣತಿಯು 2024 ರಲ್ಲಿ ನಡೆಯಲಿದೆ ಮತ್ತು ಸೆಪ್ಟೆಂಬರ್-ಡಿಸೆಂಬರ್ 2024 ರ ಅವಧಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಭಾಗವಹಿಸುವಿಕೆಯಲ್ಲಿ ನಡೆಸಲಾಗುವುದು" ಎಂದು ಸಭೆಯ ನಂತರ ಸಚಿವಾಲಯವು ಹೇಳಿಕೆಯನ್ನು ನೀಡಿತು.* ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪ್ರಕಾರ, ಜಾನುವಾರು ಗಣತಿಯನ್ನು ನಡೆಸಲು ಮೊಬೈಲ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಮತ್ತು ನಂತರ ಆನ್‌ಲೈನ್‌ನಲ್ಲಿ ಡೇಟಾವನ್ನು ಸಲ್ಲಿಸಲಾಗುತ್ತದೆ.* ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಗಣತಿ ನಡೆಯಲಿದೆ. ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ, ಹೇಸರಗತ್ತೆ, ಕತ್ತೆ, ಒಂಟೆ, ನಾಯಿ, ಮೊಲ, ಸಾಕಾನೆಗಳ ಎಣಿಕೆ ನಡೆಯಲಿದೆ. ಕೋಳಿ, ಬಾತುಕೋಳಿ ಸೇರಿದಂತೆ ಕುಕ್ಕುಟ ವಿಭಾಗದಲ್ಲಿರುವ ಪಕ್ಷಿಗಳ ಎಣಿಕೆ ನಡೆಯಲಿದೆ. ಜಾನುವಾರು ಮತ್ತು ಪಕ್ಷಿಗಳ ತಳಿ, ಲಿಂಗ ಮತ್ತು ವಯಸ್ಸನ್ನು ದಾಖಲಿಸಲಾಗುತ್ತದೆ.* ಭಾರತವು ಪ್ರತಿ ಐದು ವರ್ಷಗಳಿಗೊಮ್ಮೆ ಜಾನುವಾರು ಗಣತಿಯನ್ನು ನಡೆಸುತ್ತಿದೆ. ಕೊನೆಯ ಜಾನುವಾರು ಗಣತಿಯನ್ನು 2019 ರಲ್ಲಿ ನಡೆಸಲಾಯಿತು.