* ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ ಮತ್ತು ದೇಶದಲ್ಲಿ ಇವಿ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಕ್ಟೋಬರ್ 01 ರಂದು (ಮಂಗಳವಾರ) "ಪಿಎಂ ಇ-ಡ್ರೈವ್ ಯೋಜನೆಗೆ" ಚಾಲನೆ ನೀಡಿದ್ದು ಅದಕ್ಕಾಗಿ 10,900 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿದೆ. * 2024ರ ಅಕ್ಟೋಬರ್ 1ರಿಂದ 2026ರ ಮಾರ್ಚ್ 31ರವರೆಗಿನ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಎಲೆಕ್ಟಿಕ್ ಮೊಬಿಲಿಟಿ ಪ್ರಮೋಷನ್ ಯೋಜನೆಯನ್ನೂ ಈ ಹೊಸ ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದೆ.* ಪ್ರತಿ ಕಿಲೋ ವಾಟ್ ಗೆ 5000 ನಿಗದಿಪಡಿಸಿದ್ದು ಮೊದಲು ವರ್ಷದಲ್ಲಿ ಗರಿಷ್ಠ 10,000 ಸಬ್ಸಿಡಿ ದೊರೆಯಲಿದೆ. ಎರಡನೇ ವರ್ಷದಲ್ಲಿ ಪ್ರತಿ ಕಿಲೋ ವಾಟ್ ಗೆ 2500 ರೂ. ಪಾವತಿಸಲಾಗುವುದು, ಸಬ್ಸಿಡಿ ಮೊತ್ತ 5000 ರೂ. ದಾಟುವಂತಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.