* ಪ್ರಪಂಚದಾದ್ಯಂತ ಪ್ರಾಣಿಗಳ ಕಲ್ಯಾಣ ಗುಣಮಟ್ಟವನ್ನು ಸುಧಾರಿಸುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 4 ರಂದು ವಿಶ್ವದಾದ್ಯಂತ ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ.* 2023 ರ  ವಿಶ್ವ ಪ್ರಾಣಿ ಕಲ್ಯಾಣ ದಿನದ ಘೋಷವಾಕ್ಯ"ಜಗತ್ತು ಅವರ ಮನೆಯೂ ಆಗಿದೆ."* ಒಂದು ಶತಕದ ಹಿಂದೆ ಜರ್ಮನಿಯ ಸೈಂಟ್ ಫ್ರಾನ್ಸಿಸ್ ಎಂಬ ತತ್ವಜ್ಞಾನಿ ಪ್ರವಚನ ನೀಡುವಾಗ ಅವರ ಸುತ್ತ ಪ್ರಾಣಿಗಳು ಸೇರುತ್ತಿದ್ದವಂತೆ, ಇದನ್ನು ಗಮನಿಸಿದ ಅವರ ಶಿಷ್ಯ ಹೀನ್ರಿಚ್ ಜಿಮ್ಮರ್ ಮ್ಯಾನ 1925ರಲ್ಲಿ ಮೊಟ್ಟ ಮೊದಲ ಕಲ್ಯಾಣಾ ದಿನ ಆಚರಿಸಿದರು. ನಂತರ 1931ರಲ್ಲಿ ವಿಶ್ವದ ಹಲವಾರು ಸಂಘಸಂಸ್ಥೆಗಳು ಒಟ್ಟುಗೂಡಿ: ಜಿಮ್ಮರ್‌ಮ್ಯಾನ್ ನೇತೃತ್ವದಲ್ಲಿ ಈ ದಿನವನ್ನು ಆಚರಿಸಿದರು. * ಪ್ರಾಣಿಗಳ ಹಕ್ಕುಗಳು ಮತ್ತು ಕ್ಷೇಮಾಭಿವೃದ್ಧಿಯ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ, ಪ್ರಾಣಿಗಳ ಕಲ್ಯಾಣ ಮಾಡಬೇಕು ಎನ್ನುವುದು ವಿಶ್ವ ಪ್ರಾಣಿ ಕಲ್ಯಾಣ ದಿನಾಚರಣೆಯ ಉದ್ದೇಶವಾಗಿದೆ.