* ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಖಾದ್ಯ ತೈಲಗಳ - ಎಣ್ಣೆಬೀಜಗಳು (NMEO-Oilseeds)ರಾಷ್ಟ್ರೀಯ ಮಿಷನ್ ಅನ್ನು ಅನುಮೋದನೆ ನೀಡಿದೆ.* ಭಾರತವು ತನ್ನ ವಾರ್ಷಿಕ ಖಾದ್ಯ ತೈಲದ ಅವಶ್ಯಕತೆಯ ಶೇಕಡಾ 50 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಈ ಮಿಷನ್ ದೇಶೀಯ ಎಣ್ಣೆಬೀಜ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಖಾದ್ಯ ತೈಲಗಳಲ್ಲಿ ಸ್ವಾವಲಂಬನೆ (ಆತ್ಮನಿರ್ಭರ್ ಭಾರತ್) ಸಾಧಿಸುವ ಗುರಿಯನ್ನು ಹೊಂದಿದೆ.* 2024-25 ರಿಂದ 2030-31 ರವರೆಗೆ 10,103 ಕೋಟಿ ರೂ.ಗಳ ವೆಚ್ಚದಲ್ಲಿ ಖಾದ್ಯ ತೈಲಗಳು - ಎಣ್ಣೆಕಾಳುಗಳ ರಾಷ್ಟ್ರೀಯ ಮಿಷನ್ (NMEO-Oilseeds)ಗೆ ಸಂಪುಟ ಅನುಮೋದನೆ ನೀಡಿದೆ.* 2031ರ ವೇಳೆಗೆ ಖಾದ್ಯ ತೈಲ ಉತ್ಪಾದನೆಯನ್ನು 12.7ಮಿಲಿಯನ್ ಟನ್'ಗಳಿಂದ 20.2 ಮಿಲಿಯನ್ ಟನ್ ಗಳಿಗೆ ಹೆಚ್ಚಿಸುವುದು ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್'ನ ಗುರಿಯಾಗಿದೆ. * ಗುಣಮಟ್ಟದ ಬೀಜಗಳ ಸಕಾಲಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಮಿಷನ್ 'ಬೀಜ ದೃಢೀಕರಣ, ಪತ್ತೆಹಚ್ಚುವಿಕೆ ಮತ್ತು ಸಮಗ್ರ ಇನ್ವೆಂಟರಿ (SATHI)' ಪೋರ್ಟಲ್ ಮೂಲಕ ಆನ್‌ಲೈನ್ 5-ವರ್ಷದ ರೋಲಿಂಗ್ ಬೀಜ ಯೋಜನೆಯನ್ನು ಪರಿಚಯಿಸುತ್ತದೆ, ಇದು ಬೀಜ-ಉತ್ಪಾದಿಸುವ ಏಜೆನ್ಸಿಗಳೊಂದಿಗೆ ಮುಂಗಡ ಒಪ್ಪಂದಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಅನುವು ಮಾಡಿಕೊಡುತ್ತದೆ.* ಭಾರತವು ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಸೋಯಾಬೀನ್ ಎಣ್ಣೆಯನ್ನು ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಸೂರ್ಯಕಾಂತಿ ರಷ್ಯಾ ಮತ್ತು ಉಕ್ರೇನ್‌ನಿಂದ ಬರುತ್ತದೆ.* ಭಾರತವು ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, ಇದು ಖಾದ್ಯ ತೈಲಗಳ ದೇಶೀಯ ಬೇಡಿಕೆಯ 57% ರಷ್ಟಿದೆ.