Job Description: * ದಕ್ಷಿಣ ಆಫ್ರಿಕಾದಿಂದ ಇಲ್ಲಿನ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಎರಡನೇ ತಂಡದಲ್ಲಿ ಒಟ್ಟು 12 ಚೀತಾಗಳು ಫೆಬ್ರುವರಿ 18ರಂದು ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. * 'ಸದ್ಯದ ಯೋಜನೆಯಂತೆ 12 ಚೀತಾಗಳು ಬರಲಿವೆ. ಇವುಗಳಲ್ಲಿ ಎಷ್ಟು ಗಂಡು, ಎಷ್ಟು ಹೆಣ್ಣು ಎಂಬುದರ ಮಾಹಿತಿ ಇಲ್ಲ' ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜೆ.ಎಸ್. ಚೌಹಾಣ್ ಅವರು ತಿಳಿಸಿದರು.* ಮೊದಲ ತಂಡದಲ್ಲಿ ಕಳೆದ ಸೆಪ್ಟೆಂಬರ್ 17ರಂದು ಐದು ಹೆಣ್ಣು ಚೀತಾಗಳು ಸೇರಿದಂತೆ ಎಂಟು ಚೀತಾಗಳನ್ನು ನಮೀಬಿಯಾದಿಂದ ಕರೆತರಲಾಗಿದ್ದು, ಕುನೊ ಉದ್ಯಾನವನ್ನು ಸೇರಿದವು.