Job Description: * ಪ್ರತಿ ವರ್ಷ ಫೆಬ್ರವರಿ ಎರಡನೇ ಭಾನುವಾರದಂದು, ಆಟಿಸಂ ಅಂತರರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಬೆಳವಣಿಗೆಯ ಅಸ್ವಸ್ಥತೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಈ ದಿನವನ್ನು ಆಟಿಸಂ ಭಾನುವಾರ ಎಂದೂ ಕರೆಯುತ್ತಾರೆ.* ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಿಶ್ವದ 270 ಜನರಲ್ಲಿ ಒಬ್ಬರು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಹೊಂದಿದ್ದಾರೆ. ಇದು ಬೆಳವಣಿಗೆಯ ಅಸಾಮರ್ಥ್ಯಗಳ ಗುಂಪಾಗಿದ್ದು ಅದು ಒಬ್ಬರ ಜೀವನದ ಹಲವು ಕ್ಷೇತ್ರಗಳಲ್ಲಿ ಸವಾಲುಗಳನ್ನು ಉಂಟುಮಾಡುತ್ತದೆ. * ಗಾಢವಾಗಿ ಪ್ರಭಾವಿತವಾಗಿರುವ ಕೆಲವು ಕ್ಷೇತ್ರಗಳಲ್ಲಿ ಸಾಮಾಜಿಕ, ಸಂವಹನ ಮತ್ತು ನಡವಳಿಕೆ ಸೇರಿವೆ. ಎಎಸ್ ಡಿ ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಅಮೌಖಿಕ ಅಥವಾ ಅವರು ನಿರ್ಬಂಧಿತ ಅಥವಾ ಪುನರಾವರ್ತಿತ ನಡವಳಿಕೆಗಳನ್ನು ಹೊಂದಿರುತ್ತಾರೆ. * 2000 ರಲ್ಲಿ, ಬ್ರಿಟಿಷ್ ನಾಗರಿಕರಾದ ಇವಾನ್ ಕೋ- ರಿಯಾ ಮತ್ತು ಅವರ ಪತ್ನಿ ಚಾರಿಕಾ ಯುಕೆಯಲ್ಲಿ ಆಟಿಸಂ ಜಾಗೃತಿ ಅಭಿಯಾನವನ್ನು ಸ್ಥಾಪಿಸಿದರು. ಅವರ ಹದಿಹರೆಯದ ಮಗ ಚಾರಿನ್‌ಗೆ ಆಟಿಸಂ ಸ್ಪೆಕ್ಟಮ್ ಡಿಸಾರ್ಡರ್ ಇರುವುದು ಪತ್ತೆಯಾಯಿತು. ಅರಿವು ಮೂಡಿಸುವುದು ಹಾಗೂ ಸ್ವತಂತ್ರಸಂಶೋಧನೆಗಾಗಿ ಪ್ರಚಾರ ಮಾಡುವುದು ಅವರ ಗುರಿಯಾಗಿತ್ತು. 2002 ಯುಕೆಯಲ್ಲಿ ಆಟಿಸಂ ಜಾಗೃತಿ ವರ್ಷವಾಯಿತು.