Job Description: * 'ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಗ್ರಾಮದ ಬಳಿ 59 ಲಕ್ಷ ಟನ್‌ಗಳಷ್ಟು ಲೀಥಿಯಂ ನಿಕ್ಷೇಪ ಪತ್ತೆಯಾಗಿದ್ದು, ಇದು ಉತ್ಕೃಷ್ಟ ಗುಣಮಟ್ಟದಿಂದ ಕೂಡಿದೆ' ಎಂದು ಸರ್ಕಾರದ ಉನ್ನತ ಅಧಿಕಾರಿ- ಯೊಬ್ಬರು ಫೆಬ್ರುವರಿ 11 ರಂದು ಹೇಳಿದ್ದಾರೆ. * ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಹಾಗೂ ಸೌರ ಫಲಕಗಳ ತಯಾರಿಕೆಯಲ್ಲಿ ಲೀಥಿಯಂ ಅನ್ನು ಪ್ರಮುಖವಾಗಿ ಬಳಸ ಲಾಗುತ್ತದೆ. ಇಂತಹ ಅಮೂಲ್ಯ ಖನಿಜದ ನಿಕ್ಷೇಪವು ಭಾರತದಲ್ಲಿ ಪತ್ತೆಯಾಗಿರುವುದು ಇದೇ ಮೊದಲು. * 'ಲೀಥಿಯಂ ಅತ್ಯಂತ ನಿರ್ಣಾಯಕ ಖನಿಜ ಸಂಪನ್ಮೂಲ. ಇಲ್ಲಿಯವರೆಗೂ ದೇಶದ ಯಾವ ಭಾಗದಲ್ಲೂ ಇದು ಪತ್ತೆಯಾಗಿರಲಿಲ. ಲೀಥಿಯಂಗಾಗಿ ನಾವು ಇತರ ದೇಶಗಳನ್ನು ಅವಲಂಬಿಸಬೇಕಾಗಿತ್ತು. ಈ ಖನಿಜವನ್ನು ಶೇ 100ರಷ್ಟು ಅಮದು ಮಾಡಿಕೊಳ್ಳುತ್ತಿದ್ದೇವೆ, ಭಾರತೀಯ ಭೂವೈಜಾನಿಕ ಸರ್ವೇಕ್ಷಣಾ ಇಲಾಖೆಯು (ಜಿಎಸ್‌ಐ) ಉನ್ನತ ಮಟ್ಟದ ಅಧ್ಯಯನ (ಜಿ-3) ಕೈಗೊಂಡಿತ್ತು. ಈ ವೇಳೆ ಸಲಾಲ್‌ ಗ್ರಾಮದಲ್ಲಿರುವ ವೈಷ್ಣೋದೇವಿ ದೇಗುಲದ ತಪ್ಪಲಿನಲ್ಲಿ ನಿಕ್ಷೇಪ ಪತ್ತೆಯಾಗಿದೆ', ಎಂದು ಜಮ್ಮು ಮತ್ತು ಕಾಶ್ಮೀರದ ಗಣಿ ಇಲಾಖೆಯ ಕಾರ್ಯದರ್ಶಿ ಅಮಿತ್ ಶರ್ಮಾ ಹೇಳಿದ್ದಾರೆ.