Job Description: * ಟೀಮ್ ಇಂಡಿಯಾ ವೈಸ್‌ ಕ್ಯಾಪ್ಟನ್‌ ಸ್ಮೃತಿ ಮಂಧಾನಾ, ಮೊದಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಸ್ಟೈಲಿಷ್‌ ಎಡಗೈ ಬ್ಯಾಟರ್‌ ನಿರೀಕ್ಷೆಯಂತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಪರವಾಗಿ ಆಡಲಿದ್ದಾರೆ. * 3.4 ಕೋಟಿ ರೂ. ಖರ್ಚುಮಾಡಿ ಸ್ಮೃತಿ ಸೇವೆಯನ್ನು ತನ್ನದಾಗಿಸಿಕೊಂಡಿತು. ಸ್ಮೃತಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನ ತಾರೆಯರಾದ ಸೋಫಿ ಡಿವೈನ್‌ (50 ಲಕ್ಷ ರೂ.) ಮತ್ತು ಎಲೀಸ್‌ ಪೆರಿ (1.7 ಕೋಟಿ ರೂ.) ಅವರನ್ನು ಖರೀದಿಸುವಲ್ಲಿಯೂ ಆರ್‌ಸಿಬಿ ಯಶಸ್ವಿಯಾಯಿತು.* ಒಟ್ಟಾರೆ 409 ಆಟಗಾರ್ರಿಯರಲ್ಲಿ 117 ಆಟಗಾರ್ತಿಯರು ವಿವಿಧ ತಂಡಗಳಲ್ಲಿ ಸ್ಥಾನ ಗಿಟ್ಟಿಸಲು ಯಶಸ್ವಿಯಾಗಿದ್ದಾರೆ. ಹರಾಜಿನಲ್ಲಿ ಮೊದಲ ಆಟಗಾರ್ತಿಯಾಗಿ ಕಾಣಿಸಿಕೊಂಡ ಸ್ಟಾರ್‌ ಓಪನರ್‌ ಸ್ಮೃತಿ ಮಂಧಾನಾ ಅವರನ್ನು ಖರೀದಿಸಲು ಆರ್‌ಸಿಬಿ, ಎಲ್ಲರ ಬಿಡ್ಡಿಂಗ್‌ ಹಿಂದಿಕ್ಕಿ 3.4 ಕೋಟಿ ರೂ.ಗಳ ಬೆಲೆ ನೀಡಿತು. ಈ ಮೂಲಕ ಎಡಗೈ ಬ್ಯಾಟರ್‌ ಸ್ಮೃತಿ ಮಂಧಾನಾ ಮಹಿಳಾ ಐಪಿಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರ್ತಿ ಆದರು. ಅಷ್ಟೇ ಅಲ್ಲದೆ ಆರ್‌ಸಿಬಿ ತಂಡದ ಕ್ಯಾಪ್ಟನ್‌ ಆಗಿ ಕೂಡ ಹೊರಹೊಮ್ಮಿದ್ದಾರೆ.