* ಒಲಿಂಪಿಕ್ಸ್ ಜ್ಯೋತಿಯಾತ್ರೆ 11 ವಾರಗಳ ಕಾಲ ದೇಶದ 450 ನಗರಗಳನ್ನು ಕ್ರಮಿಸಲಿದೆ. ಈ  ಯಾತ್ರೆಯುದ್ದಕ್ಕೆ 10,000 ಮಂದಿ ಜ್ಯೋತಿ ಹಿಡಿದು ಓಡಲಿದ್ದಾರೆ. ಒಲಿಂಪಿಕ್ಸ್‌ ಜುಲೈ 26ರಂದು ಪ್ಯಾರಿಸ್‌ನಲ್ಲಿ ಆರಂಭವಾಗಲಿದೆ.* ಮೆಡಿಟರೆನಿಯನ್ ಸಾಗರದಲ್ಲಿ ಮುಖ ಮಾಡಿ ನಿಂತಿರುವ ಐತಿಹಾಸಿಕ ನಾಟ್ರಿ ಡಾಮ್ ಮತ್ತು ಲಾ ಗಾರ್ದೆ ಬೆಸಿಲಿಕಾದಿಂದ ಜ್ಯೋತಿಯ ಯಾತ್ರೆಗೆ ಮಾಜಿ ಫುಟ್‌ಬಾಲ್ ಆಟಗಾರರಾದ ಬಾಸಿಲ್ ಬೊಲಿ ಜ್ಯೋತಿಯ ಯಾತ್ರೆ ಆರಂಭಿಸಿದರು.* 1990 ರ ದಶಕದಲ್ಲಿ ಅವರು ಮಾರ್ಸೆ ತಂಡಕ್ಕೆ ಬಾಸಿಲ್ ಬೊಲಿ ಅವರು ಆಡಿದ್ದರು. * ಒಲಿಂಪಿಕ್ ಜ್ಯೋತಿಯನ್ನು ಹೊತ್ತು ತಂದ 'ಬೆಲೆಮ್' ಹೆಸರಿನ ಹಡಗು ಮಾರ್ಸೆ ತಲುಪುವ ವೇಳೆಗೆ 2.30.000 ಜನರು ಸೇರಿ ಭವ್ಯ ಸ್ವಾಗತ ಕೋರಿದರು.