Job Description: ➤ ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ (Judicial Service Examinations) ತಯಾರಿ ನಡೆಸುತ್ತಿರುವ ಕಾನೂನು ಪದವೀಧರರಿಗೆ ಭಾರತದ ಸರ್ವೋಚ್ಚ ನ್ಯಾಯಾಲಯ (Supreme Court) ಸಿಹಿ ಸುದ್ದಿ ನೀಡಿದೆ. ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್) ಪ್ರವೇಶ ಮಟ್ಟದ ಹುದ್ದೆಗಳ ಪರೀಕ್ಷೆಗೆ ಹಾಜರಾಗಲು ಇದ್ದ ಕಡ್ಡಾಯ 3 ವರ್ಷಗಳ ವಕೀಲ ವೃತ್ತಿ ಅನುಭವವನ್ನು (Law Practice Requirement) ಈಗ 1 ವರ್ಷಕ್ಕೆ ಕಡಿತಗೊಳಿಸಿ ಸುಪ್ರೀಂ ಕೋರ್ಟ್ ಚಾರಿತ್ರಿಕ ತೀರ್ಪು ನೀಡಿದೆ. ಈ ಮಹತ್ವದ ನಿರ್ಧಾರವು ಲಕ್ಷಾಂತರ ಕಾನೂನು ವಿದ್ಯಾರ್ಥಿಗಳಿಗೆ ಮತ್ತು ಕಿರಿಯ ವಕೀಲರಿಗೆ ಸಿವಿಲ್ ನ್ಯಾಯಾಧೀಶರಾಗುವ ಕನಸನ್ನು ಶೀಘ್ರವಾಗಿ ನನಸಾಗಿಸಿಕೊಳ್ಳಲು ಹಾದಿ ಸುಗಮಗೊಳಿಸಿದೆ.➤ ತೀರ್ಪಿನ ಪ್ರಮುಖ ಮುಖ್ಯಾಂಶಗಳು: ಅನುಭವ ಕಡಿತ: ಎಂಟ್ರಿ ಲೆವೆಲ್ ಸಿವಿಲ್ ಜಡ್ಜ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿದ್ದ 3 ವರ್ಷಗಳ ಸಕ್ರಿಯ ವಕೀಲ ವೃತ್ತಿಯ ಅನುಭವವನ್ನು 1 ವರ್ಷಕ್ಕೆ ಇಳಿಸಲಾಗಿದೆ. 2:1 ಬಹುಮತದ ತೀರ್ಪು: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಈ ಬಹುಮತದ ತೀರ್ಪು ನೀಡಿದೆ. ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರು ಭಿನ್ನ ಅಭಿಪ್ರಾಯ (Dissenting View) ವ್ಯಕ್ತಪಡಿಸಿದ್ದಾರೆ. 2 ವರ್ಷಗಳ ಕಡ್ಡಾಯ ತರಬೇತಿ: ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ರಾಜ್ಯದ 'ನ್ಯಾಯಾಂಗ ಅಕಾಡೆಮಿ'ಯಲ್ಲಿ (State Judicial Academy) 1 ವರ್ಷದ ತೀವ್ರ ತರಬೇತಿ ಹಾಗೂ ಜಿಲ್ಹಾ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಅಡಿಯಲ್ಲಿ 1 ವರ್ಷದ ಕ್ಲರ್ಕ್‌ಶಿಪ್ (Law Clerkship) ಪೂರ್ಣಗೊಳಿಸಬೇಕಾಗುತ್ತದೆ. ಮಾರ್ಚ್ 31, 2027 ರವರೆಗೆ ತಾತ್ಕಾಲಿಕ ವಿನಾಯಿತಿ (Transitional Relaxation): ಮೇ 20, 2025 ರಿಂದ ಮಾರ್ಚ್ 31, 2027 ರ ನಡುವೆ ನ್ಯಾಯಾಂಗ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅಭ್ಯಾಸ ಪ್ರಮಾಣಪತ್ರ (Practice Certificate) ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ. ಏಪ್ರಿಲ್ 1, 2027 ರಿಂದ ಹೊಸ ನಿಯಮ ಜಾರಿ: ಏಪ್ರಿಲ್ 1, 2027 ರ ನಂತರ ಹೊರಬೀಳುವ ಅಧಿಸೂಚನೆಗಳಿಗೆ 1 ವರ್ಷದ ಸಕ್ರಿಯ ವಕೀಲ ವೃತ್ತಿಯ ಅನುಭವದ 'ದಾಖಲೆ ಪ್ರಮಾಣಪತ್ರ' (Certificate of Proof of Practice) ಕಡ್ಡಾಯವಾಗಿರುತ್ತದೆ. ➤ ಹೊಸ ತರಬೇತಿ ಮಾದರಿ: ವರ್ಷ 1: ಸಂಬಂಧಪಟ್ಟ ರಾಜ್ಯ ನ್ಯಾಯಾಂಗ ಅಕಾಡೆಮಿಯಲ್ಲಿ (State Judicial Academy) ಸಿದ್ಧಾಂತ ಮತ್ತು ಪ್ರಾಯೋಗಿಕ ತರಬೇತಿ. ವರ್ಷ 2 (ಮೊದಲ 6 ತಿಂಗಳು): ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ (District and Sessions Judge) ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಣೆ. ವರ್ಷ 2 (ಉಳಿದ 6 ತಿಂಗಳು): ರಾಜ್ಯದ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಬಳಿ 'ಲಾ ಕ್ಲರ್ಕ್‌ಶಿಪ್' (Law Clerkship). KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ