Job Description: * ಒಡಿಶಾದ ರೌರ್ಕೆಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ ಉದ್ಘಾಟನೆಯಾದ ಎರಡೇ ತಿಂಗಳಲ್ಲಿ ಗಿನ್ನಿಸ್ ರೆಕಾರ್ಡ್ ಪುಸ್ತಕಕ್ಕೆ ಸೇರಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಆಸನಗಳನ್ನು ಹೊಂದಿರುವ ಅತಿ ದೊಡ್ಡ ಹಾಕಿ ಕ್ರೀಡಾಂಗಣ ಎಂಬ ಖ್ಯಾತಿಗೆ ಪಾತ್ರವಾಗುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ಗೆ ದಾಖಲಾಗಿದೆ. * ಈ ಕ್ರೀಡಾಂಗಣದಲ್ಲಿ 2023ರ ಹಾಕಿ ವಿಶ್ವ ಕಪ್ ಅನ್ನು ಭಾರತ ಅತ್ಯಂತ ಯಶಸ್ವಿಯಾಗಿ ನಡೆದಿತ್ತು, ಇದು ಭಾರತದ ಹಾಕಿ ಇತಿಹಾಸದಲ್ಲೇ ಒಂದು ಪಡಿಯಚ್ಚು ಮೂಡಿಸಿದೆ. * ಈ ಹಾಕಿ ಕ್ರೀಡಾಂಗಣ ಸುಮಾರು 20,011 ಆಸನಗಳನ್ನು ಹೊಂದಿದ್ದು ಪ್ರೇಕ್ಷಕರು ಯಾವುದೇ ಮೂಲೆಯಲ್ಲಿ ಕುಳಿತರೂ ಯಾವುದೇ ಅಡೆತಡೆಗಳಿಲ್ಲದೆ ಪಂದ್ಯಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ಈ ಕ್ರೀಡಾಂಗಣದಲ್ಲಿ ಮಾಡಲಾಗಿದೆ.